+91-8482-245241 regkvafsu@gmail.com

ಪಶುವೈದ್ಯಕೀಯ ಸೂಕ್ಷ್ಮಾಣುಜೀವಿ ವಿಜ್ಞಾನ ವಿಭಾಗ

ಪಶುವೈದ್ಯಕೀಯ ಸೂಕ್ಷ್ಮಾಣುಜೀವಿ ವಿಜ್ಞಾನ ವಿಭಾಗವು ಸ್ನಾತಕ, ಸ್ನಾತಕೋತ್ತರ ಹಾಗೂ ಪಿಹೆಚ್‍ಡಿ ಪದವಿ ಕಾರ್ಯಕ್ರಮವನ್ನು ನೀಡುತ್ತಿದೆ. ಐದು ಬೋಧಕ ಸಿಬ್ಬಂದಿಗಳಲ್ಲಿ ಒಬ್ಬರು ಪ್ರಾಧ್ಯಾಪಕರು, ಇಬ್ಬರು ಸಹ ಪ್ರಾಧ್ಯಾಪಕರು ಹಾಗೂ ಇಬ್ಬರು ಸಹಾಯಕ ಪ್ರಾಧ್ಯಾಪಕರು, ಇವರ ಜೊತೆಗೆ ಒಬ್ಬರು ಪ್ರಯೋಗಶಾಲಾ ಸಹಾಯಕರು ಹಾಗೂ ಒಬ್ಬರು ಪರಿಚಾರಕರು ಕೆಲಸ ಮಾಡುತ್ತಿದ್ದಾರೆ. ಇದುವರೆಗು 240 ಎಮ್‍ವಿಎಸ್‍ಸಿ ಮತ್ತು 45 ಪಿಹೆಚ್‍ಡಿ ವಿದ್ಯಾರ್ಥಿಗಳು ಪದವಿ ಮುಗಿಸಿರುತ್ತಾರೆ. ಪ್ರಸ್ತುತ 9 ಎಮ್‍ವಿಎಸ್‍ಸಿ ಮತ್ತು 10 ಪಿಹೆಚ್‍ಡಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

2013 ರಲ್ಲಿ ಒಬ್ಬ ಪಿಹೆಚ್‍ಡಿ ವಿದ್ಯಾರ್ಥಿ ಡಾ. ಬಿ. ಎಮ್. ಚಂದ್ರಾನಾಯಕ (ಪ್ರಮುಖ ಸಲಹೆಗಾರರು: ಡಾ. ಡಿ. ರತ್ನಮ್ಮ) ರವರಿಗೆ ಪಿಹೆಚ್‍ಡಿ ಸಂಶೋಧನೆಗೆ ಅತ್ಯುತ್ತಮ ಡಾಕ್ಟರಲ್ ಥೀಸಿಸ್ ಗಾಗಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ನೀಡುವ ಜವಾಹರಲಾಲ್ ನೆಹರೂ ಪ್ರಶಸ್ತಿ ದೊರಕಿದೆ. ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಕಿರಿಯ ವಿಜ್ಞಾನಿ ಪ್ರಶಸ್ತಿ ಹಾಗು ಅತ್ಯುತ್ತಮ ಸಂಶೋಧನಾ ಮಂಡನೆ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಇದುವರೆಗೂ 30 ಕ್ಕಿಂತ ಅಧಿಕ ವಿವಿಧ ಸಂಶೋಧನಾ ಯೋಜನೆಗಳನ್ನು ಮುಗಿಸಿ ಪ್ರಸ್ತುತ ಐದು ಸಂಶೋಧನಾ ಯೋಜನೆಗಳು ಜೊತೆಗೆ ಒಂದು ಆರ್‍ಕೆವಿವೈ ಯೋಜನೆ ಚಾಲ್ತಿಯಲ್ಲಿರುತ್ತದೆ. ಲಸಿಕೆ ಮತ್ತು ರೋಗ ನಿರ್ಧಾರದ ಪರೀಕ್ಷೆಗಳಿಗೆ ನಾಲ್ಕು ಪೇಟೆಂಟು ದೊರಕಿದೆ. ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆಯ ಮಾನ್ಯತೆ ಪಡೆದ ರೇಬೀಸ್ ಡಯಾಗ್ನೋಸ್ಟಿಕ್ ಪ್ರಯೋಗಾಲಯವು ಕಾರ್ಯನಿರ್ವಹಿಸುತ್ತಿದೆ. ಸಾಕುಪ್ರಾಣಿಗಳಲ್ಲಿ ರೇಬೀಸ್ ರೋಗ ನಿರ್ಧಾರ ಮತ್ತು ರೇಬೀಸ್ ಲಸಿಕೆಯನ್ನು ನೀಡಿದ ಸಾಕು ಪ್ರಾಣಿಗಳಲ್ಲಿ ಪ್ರತಿಕಾಯಗಳ ಗುರುತಿಸುವ ಪರೀಕ್ಷೆ ಮುಂತಾದ ಸೇವೆಗಳನ್ನು ನೀಡಲಾಗುತ್ತಿದೆ.