ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ, ಭೂತನಾಳ, ವಿಜಯಪುರ
ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ, ಭೂತನಾಳ, ವಿಜಯಪುರ, ಕರ್ನಾಟಕ, ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ, ವಿಶ್ವವಿದ್ಯಾಲಯದ ಅಂಗಸಂಸ್ಥೆಯಾಗಿದ್ದು 2010ರಲ್ಲಿ ಪ್ರಾರಂಭವಾಯಿತು. ಸಂಸ್ಥೆಯ ಮೂಲ ಉದ್ದೇಶ ಉತ್ತರ ಕರ್ನಾಟಕದಲ್ಲಿ ಒಳನಾಡು ಮೀನುಗಾರಿಕೆಯನ್ನು ಅಭಿವೃದ್ದಿಪಡಿಸುವುದು ಮತ್ತು ಸಂಶೋಧನೆ ಹಾಗೂ ವಿಸ್ತರಣೆಯ ಮೂಲಕ ಜನಪ್ರಿಯಗೊಳಿಸುವುದು. ಸಂಸ್ಥೆಯು 9.04 ಎಕರೆಯ ವಿಸ್ತೀರ್ಣ ಹೊಂದಿದ್ದು, ಸೋಲಾಪುರ ರಾಷ್ಟ್ರಿಯ ಹೆದ್ದಾರಿಯ ಬೈಪಾಸಿನ ಸಮೀಪವಿರುವ ಭೂತನಾಳ ಕೆರೆಯ ಹತ್ತಿರವಿದೆ. ಕೇಂದ್ರವು ಉತ್ತಮ ಪ್ರಯೋಗಾಲಯ ಹೊಂದಿದೆ. ಮೀನು ಆರೋಗ್ಯ ತಪಾಸಣೆ, ಮಣ್ಣು ಮತ್ತು ನೀರು ಪರೀಕ್ಷೆಯನ್ನು ರೈತರಿಗೆ ಉಚಿತವಾಗಿ ಮಾಡಿಕೊಡಲಾಗುತ್ತಿದೆ. ರೈತರಿಗೆ ಉತ್ತಮ ಗುಣಮಟ್ಟದ ಮೀನುಮರಿ ತಳಿಗಳನ್ನು ಮತ್ತು ಅಲಂಕಾರಿಕ ಮೀನುಮರಿಗಳನ್ನು ಮಾರಾಟ ಮಾಡಲಾಗುತ್ತಿದೆ. ಕೇಂದ್ರದ ವತಿಯಿಂದ ರೈತರಿಗೆ ಉಚಿತವಾಗಿ ಮೀನುಗಾರಿಕೆಗೆ ಸಂಬಂಧಿಸಿದ ತರಬೇತಿ, ಪ್ರಾತ್ಯಕ್ಷಿಕೆ, ವಸ್ತುಪ್ರದರ್ಶನಗಳನ್ನು ಏರ್ಪಡಿಸಿ ಅವುಗಳ ಮೂಲಕ ಮಾಹಿತಿ ಮತ್ತು ತಂತ್ರಜ್ಞಾನವನ್ನು ನೀಡುತ್ತಿದೆ.