ಕೃಷಿ ವಿಜ್ಞಾನ ಕೇಂದ್ರ, ದಕ್ಷಿಣ ಕನ್ನಡ
ಭಾರತೀಯ ಕೃಷಿ ಅನುಸಂಧಾನ ಪರಿಷತ್ (ನವದೆಹಲಿ) ರೈತರಿಗೆ ಕೃಷಿ ಸಂಬಂಧಿತ ಅಗತ್ಯ ತಾಂತ್ರಿಕತೆಗಳನ್ನು ಪೂರೈಸುವ ಉದ್ದೇಶದಿಂದ ಪ್ರತಿ ಜಿಲ್ಲೆಯಲ್ಲಿ ಒಂದು ಕೃಷಿ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲಾಗಿದೆ. ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಇದರ ಅಡಿಯಲ್ಲಿ ಕೃಷಿ ಸಂಶೋಧನಾ ಕೇಂದ್ರ, ಕಂಕನಾಡಿ ಮಂಗಳೂರಿನಲ್ಲಿ ದಿನಾಂಕ 03-11-2014ರಂದು ಕೃಷಿ ವಿಜ್ಞಾನ ಕೇಂದ್ರವನ್ನು ವಿದ್ಯುಕ್ತವಾಗಿ ಕಾರ್ಯಾರಂಭ ಮಾಡಲಾಯಿತು ಮತ್ತು 01-09-2011ರಂದು ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ ಇದರ ಆಡಳಿತಾತ್ಮಕ ವ್ಯವಸ್ಥೆಗೆ ಒಳಪಡಿಸಲಾಯಿತು.
ಕೃಷಿ ವಿಜ್ಞಾನ ಕೇಂದ್ರಗಳ ಮೂಲೋದ್ದೇಶಗಳು
• ಸ್ಥಳ ನಿರ್ದಿಷ್ಟ ಸುಸ್ಥಿರ ಭೂಬಳಕೆ ವ್ಯವಸ್ಥೆಗೆ ಸೂಕ್ತ ತಂತ್ರಜ್ಞಾನವನ್ನು ಗುರುತಿಸಲು ರೈತರ ತಾಕುಗಳಲ್ಲಿ ತಂತ್ರಜ್ಞಾನ ಪರೀಕ್ಷೆಗಳನ್ನು ನಡೆಸುವುದು.
• ಉತ್ಪನ್ನ ಮಾಹಿತಿ ಪಡೆಯಲು ಹಾಗೂ ರೈತರ ಅಭಿಪ್ರಾಯ ತಿಳಿಯಲು ವಿವಿಧ ಬೆಳೆಗಳ ಮತ್ತು ಉದ್ಯಮಗಳ ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು ರೈತರ ತಾಕುಗಳಲ್ಲಿ ಏರ್ಪಡಿಸುವುದು.
• ರೈತರಿಗೆ ನೂತನ ತಂತ್ರಜ್ಞಾನದ ಮರುಪರಿಶೀಲನೆ ಹಾಗೂ ಪ್ರಾತ್ಯಕ್ಷಿಕೆಗಳ ತಂತ್ರಜ್ಞಾನದ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಮತ್ತು ವಿವಿಧ ಇಲಾಖೆಗಳ ವಿಸ್ತರಣಾ ಕಾರ್ಯಕರ್ತರುಗಳಿಗೆ ಆಧುನಿಕ ತಂತ್ರಜ್ಞಾನದ ಬೆಳವಣಿಗೆಯ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು
• ನೂತನ ಕೃಷಿ ತಂತ್ರಜ್ಞಾನಗಳ ಜಾಗೃತಿಗಾಗಿ ಹಲವಾರು ಸೂಕ್ತ ವಿಸ್ತರಣಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
• ರೈತರ ಅಗತ್ಯಕ್ಕನುಗುಣವಾಗಿ ಗುಣಮಟ್ಟದ ಬೀಜ, ಕಸಿಗಿಡಗಳು, ಜಾನುವಾರು ತಳಿಗಳು, ಮೀನಿನ ತಳಿಗಳು, ಪ್ರಾಣಿಜನ್ಯ ಉತ್ಪನ್ನಗಳು ಮತ್ತು ಜೈವಿಕ ಉತ್ಪನ್ನಗಳನ್ನು ಒದಗಿಸುವುದು.
• ಜಿಲ್ಲೆಯ ಕೃಷಿ ಆರ್ಥಿಕತೆಯ ಅಭಿವೃದ್ಧಿಗಾಗಿ ಶ್ರಮಿಸುವ ಸರ್ಕಾರಿ, ಖಾಸಗಿ ಹಾಗೂ ಸ್ವಯಂಪ್ರೇರಿತ ಸಂಸ್ಥೆಗಳಿಗೆ ಅಗತ್ಯವಿರುವ ಕೃಷಿ ತಂತ್ರಜ್ಞಾನಗಳ ಹಾಗೂ ಸಂಪನ್ಮೂಲ ಕೇಂದ್ರವಾಗಿ ಕಾರ್ಯನಿರ್ವಹಿಸುವುದು.
ಕರ್ನಾಟಕ ಪಶುವೈದ್ಯಕೀಯ , ಪಶು ಮತ್ತು ಮೀನುಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯದಡಿಯಲ್ಲಿ ಪ್ರಸ್ತುತ ಒಂದು ಕೃಷಿ ವಿಜ್ಞಾನ ಕೇಂದ್ರವು ಕಾರ್ಯನಿರ್ವಹಿಸುತ್ತಿದ್ದು. ಅವಶ್ಯಕ ಮೂಲಭೂತ ಸೌಕರ್ಯ ಹಾಗೂ ಮಾನವ ಸಂಪನ್ಮೂಲಗಳನ್ನು ಒಳಗೊಂಡಿರುತ್ತವೆ. ಪ್ರತಿ ಕೇಂದ್ರದಲ್ಲಿ 16 ಜನ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಅವರಲ್ಲಿ ಒಬ್ಬರು ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು, 6 ಜನ ವಿಜ್ಞಾನಿಗಳು, 3 ಜನ ತಾಂತ್ರಿಕ ಸಿಬ್ಬಂದಿ ಹಾಗೂ 7 ಜನ ಇತರೆ ಸಿಬ್ಬಂದಿಗಳನ್ನು ಒಳಗೊಂಡಿರುತ್ತದೆ. ಈ ಕೇಂದ್ರದÀಲ್ಲಿ ವಿವಿಧ ಪ್ರಾಯೋಗಿಕ ಘಟಕಗಳು, ಪ್ರಾತ್ಯಕ್ಷಿಕೆಗಳು, ತರಬೇತಿ ಸೌಲಭ್ಯಗಳು, ಮಣ್ಣು, ನೀರು ಮತ್ತು ಸಸ್ಯ ಮಾದರಿ ವಿಶ್ಲೇಷಣಾ ಸೌಲಭ್ಯ, ವಸತಿ ಸೌಲಭ್ಯಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ.
ವೈಜ್ಞಾನಿಕ ಸಲಹಾ ಸಮಿತಿಯು ಕೃಷಿ ವಿಜ್ಞಾನ ಕೇಂದ್ರಗಳ ಚಟುವಟಿಕೆಗಳನ್ನು ಯೋಜಿಸಲು ಮತ್ತು ಪರಿಶೀಲಿಸಲು ಸಲಹಾ ಮಂಡಳಿಯಾಗಿರುತ್ತದೆ. ವಿಶ್ವವಿದ್ಯಾನಿಲಯದ ಕುಲಪತಿಗಳು ಇದರ ಅಧ್ಯಕ್ಷರಾಗಿ, ವಿಸ್ತ್ತರಣಾ ನಿರ್ದೇಶಕರು, ಐಸಿಎಆರ್‍ನ ವಲಯ ನಿರ್ದೇಶಕರು ಮತ್ತು ಜಿಲ್ಲೆಯ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ರೈತರು ಸದಸ್ಯರಾಗಿರುತ್ತಾರೆ ಹಾಗೂ ಕೆ.ವಿ.ಕೆಯ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ.
ಚಟುವಟಿಕೆಗಳು
• ವೃತ್ತಿಪರ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು.
• ಪ್ರದರ್ಶನ ಘಟಕಗಳನ್ನು ಸ್ಥಾಪಿಸುವುದು.
• ಗುಣಮಟ್ಟದ ಬೀಜಗಳ ಉತ್ಪಾದನೆ, ಕಸಿಗಿಡಗಳು, ಜಾನುವಾರು ತಳಿಗಳು, ಮೀನಿನ ತಳಿಗಳು ಪ್ರಾಣಿಜನ್ಯ ಉತ್ಪನ್ನಗಳು ಮತ್ತು ಜೈವಿಕ ಉತ್ಪನ್ನಗಳನ್ನು ಒದಗಿಸುವುದು.
• ಸಲಹಾ ಮತ್ತು ಸಲಹಾ ಸೇವೆಗಳನ್ನು ಒದಗಿಸುವುದು.
• ಅಗತ್ಯವಾದ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು.