+91-8482-245241 regkvafsu@gmail.com

ಸಹಕುಲಾಧಿಪತಿಗಳು

ಶ್ರೀ. ಕೆ. ವೆಂಕಟೇಶ್
ಮಾನ್ಯ ಸಚಿವರು , ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ

ಶ್ರೀ. ಕೆ. ವೆಂಕಟೇಶ್ ರವರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕಿತ್ತೂರಿನಲ್ಲಿ ಜನಿಸಿದರು ಶ್ರೀಯುತರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಆರನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಕೆ. ವೆಂಕಟೇಶ್ ರವರು ೨೭.೦೫.೨೦೨೩ ರಿಂದ ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆಯ ಸಚಿವರಾಗಿದ್ದಾರೆ. ಶ್ರೀಯುತರು ಸೌಮ್ಯ ಸ್ವಭಾವದ, ಹಿರಿಯ ಹಾಗೂ ಮುತ್ಸದ್ದಿ ರಾಜಕಾರಣಿ. ತಾಲ್ಲೂಕ್ ಬೋರ್ಡ್ ಅಧ್ಯಕ್ಷರಾಗುವ ಮೂಲಕ ರಾಜಕೀಯಕ್ಕೆ ಕಾಲಿರಿಸಿದ ಶ್ರೀಯುತರು ತಮ್ಮ ೪೨ ವರ್ಷಗಳ ಕಾಲದ ಸುದೀರ್ಘ ರಾಜಕಾರಣದಲ್ಲಿ ೯ ಚುನಾವಣೆಗಳನ್ನು ಎದುರಿಸಿದ್ದಾರೆ. ಒಟ್ಟು ೬ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಒಮ್ಮೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.