+91-8482-245241 regkvafsu@gmail.com

ಡೀನ್

ಪ್ರೊ. ಎಂ. ನಾರಾಯಣ ಸ್ವಾಮಿ,

ಮಹಾವಿದ್ಯಾಲಯ : ಪಶುವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು.

ಹುದ್ದೆ::
ಡೀನ್,
ಪಶುವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು.

ವಿದ್ಯಾರ್ಹತೆ:

ಬಿ.ವಿ.ಎಸ್ಸ್ಸಿ., ಎಂ.ವಿ.ಎಸ್ಸಿ., ಪಿ.ಹೆಚ್.ಡಿ. (ಪಶುವೈದ್ಯಕೀಯ ಶರೀರಕ್ರಿಯಾ ವಿಜ್ಞಾನ)

ಸಂಪರ್ಕ:
ಕಚೇರಿ : 080-23410509
ಮಿಂಚಂಚೆ :  deanvch@gmail.com

ಒಟ್ಟು 32 ವರ್ಷಗಳ ಬೋಧನೆಯ ಅನುಭವ. ಇವರ ಮಾರ್ಗದರ್ಶನದಲ್ಲಿ ಇಲ್ಲಿಯವರೆಗೆ 17 ಸ್ನಾತಕೋತ್ತರ ಮತ್ತು 07 ಡಾಕ್ಟರೇಟ್ ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಒಟ್ಟು 58 ಮಾಸ್ಟರ್ಸ್ ಮತ್ತು 21 ಡಾಕ್ಟರಲ್ ವಿದ್ಯಾರ್ಥಿಗಳ ಸಲಹಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ವಿಶ್ವವಿದ್ಯಾಲಯ ಅನುದಾನಿತ ಎರಡು ಸಂಶೋಧನಾ ಪ್ರಾಯೋಜನೆಗಳನ್ನು ಪೂರ್ಣಗೊಳಿಸಿದ್ದಾರೆ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಒದಗಿಸಿದ ವಿಜ್ಞಾನ ಮತ್ತು ತಂತ್ರಜ್ಞಾನ ಮೂಲಸೌಕರ್ಯ ನಿಧಿಯ ಪ್ರಾಯೋಜನೆಯಲ್ಲಿ ಸಹ ಸಂಶೋಧಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸುಮಾರು 101 ಸಂಶೋಧನಾ ಲೇಖನಗಳು ಮತ್ತು 69 ಜನಪ್ರಿಯ ವೈಜ್ಞಾನಿಕ ಲೇಖನಗಳನ್ನು ಒಳಗೊಂಡಂತೆ ಒಟ್ಟು 259 ವೈಜ್ಞಾನಿಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಡಾಕ್ಟೊರೇಟ್ ಪದವಿ ಪಡೆದ ಇಬ್ಬರು ಸಂಶೋಧಕರು ತಮ್ಮ ಅಧ್ಯಯನಕ್ಕಾಗಿ ಕ್ರಮವಾಗಿ ಪ್ರತಿಷ್ಟಿತ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಇನ್ಸ್‍ಸ್ಪೈರ್ ಫೆಲೋಶಿಪ್ ಹಾಗೂ ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಡಿ ಎಸ್ ಟಿ - ಪಿ ಎಚ್ ಡಿ ಫೆಲೋಶಿಪ್ ಪಡೆದ ಹೆಗ್ಗಳಿಕೆಯಿದೆ.

ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ರೈತರಿಗಾಗಿ 17 ರೇಡಿಯೋ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಅರ್ಕಾವತಿ ನದಿ ಪುನಶ್ಚೇತನ ಕಾರ್ಯಕ್ರಮದ ಭಾಗವಾಗಿ 2005 ರಲ್ಲಿ ಮೂಡಿಬಂದ ‘ಹರಿದು ಬಾ ತಾಯಿ ಅರ್ಕಾವತಿ’ ಎಂಬ ಪ್ರಾಯೋಜಿತ ಬಾನುಲಿ ಕಾರ್ಯಕ್ರಮದ ಸರಣಿಯಲ್ಲಿ ಎರಡು ಸಾರಿ ಪಶುಸಂಗೋಪನೆಯ ಮೇಲೆ ಜೀವನದಿಗಳ ಪ್ರಭಾವ ಕುರಿತಂತೆ ತಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ.

ಕನ್ನಡದಲ್ಲಿ 1. ಜಾನುವಾರು, 2. ತೆನೆಮರೆಯ ಕ್ರಾಂತಿ ರಾಗಿ ಲಕ್ಷ್ಮಣಯ್ಯ, 3. ನಿಮಗೆ ನೀವೇ ಬೆಳಕಾಗಿ, 4. ಪಶುವೈದ್ಯ ಸಂಪದ, 5. ಮಹಾನದಿಯ ಉಗಮ, 6. ಜ್ಞಾನ ವಿಜ್ಞಾನ ಮತ್ತು 7. ಮರೆಯಲಾಗದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂಬ ಒಟ್ಟು ಏಳು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಪ್ರಥಮ ಪಿಯುಸಿಯ ಕನ್ನಡ ಪಠ್ಯದ ‘ರಾಗಿಮುದ್ದೆ’ ಎಂಬ ಅಧ್ಯಾಯದ ಕೊನೆಯಲ್ಲಿ ಹೆಚ್ಚಿನ ಓದಿಗಾಗಿ ಇವರ ‘ತೆನೆಮರೆಯ ಕ್ರಾಂತಿ’ ಕೃತಿಯನ್ನು ನಿಗದಿ ಮಾಡಲಾಗಿದೆ. ರಾಜ್ಯದ ಎಲ್ಲಾ ಕೃಷಿ ಸಂಬಂಧಿತ ವಿವಿಗಳಲ್ಲಿ ಇವರ ಬರಹವು ಸಾಂಸ್ಕೃತಿಕ ಕನ್ನಡ ವಿಷಯದ ಪಠ್ಯವಾಗಿದೆ. ಬೆಂಗಳೂರು ನಗರ ವಿವಿಯ ಬಿಕಾಂ ತರಗತಿಗೂ ಕೂಡ ಇವರ ಲೇಖನವೊಂದು ಪಠ್ಯವಾಗಿತ್ತು.

ಕರ್ನಾಟಕ ಸರ್ಕಾರವು 2017 ರಲ್ಲಿ ಬೆಂಗಳೂರಿನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ 125 ನೇ ಜನ್ಮದಿನದ ಅಂಗವಾಗಿ ಆಯೋಜಿಸಲಾದ ಅಂತರರಾಷ್ಟ್ರೀಯ ಸಮ್ಮೇಳನದ ಸಂಘಟನಾ ಸಮಿತಿಯ ಸದಸ್ಯರಾಗಿ ಸುಮಾರು ಒಂದು ವರ್ಷ ಕಾಲ ಕಾರ್ಯನಿರ್ವಹಿಸಿದರು ಮತ್ತು ಸಮ್ಮೇಳನದಲ್ಲಿ ಒಂದು ಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದರು. 2017 ರಿಂದ 2020 ರವರಗೆ ಕರ್ನಾಟಕ ಜೀವವೈವಿಧ್ಯ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. 2019 ರಲ್ಲಿ ಹೈದರಾಬಾದಿನ ರಾಷ್ಟ್ರೀಯ ಕೃಷಿ ಸಂಶೋಧನಾ ನಿರ್ವಹಣೆಯ ಅಕಾಡೆಮಿಯವರು ನಡೆಸಿದ ‘ಬೋಧನಾ ತಂತ್ರಜ್ಞಾನ’ದ ಒಂದು ತಿಂಗಳ ಮೂಕ್ ಕೋರ್ಸಿನಲ್ಲಿ ಉತ್ತೀರ್ಣತೆ ಹೊಂದಿದ್ದಾರೆ. ಕೆಲವು ಅಂತರರಾಷ್ಟ್ರೀಯ ಜರ್ನಲ್ಲುಗಳ ಸಂಪಾದಕೀಯ ಮಂಡಳಿಯ ಸದಸ್ಯರಾಗಿದ್ದಾರೆ.

ಪ್ರಶಸ್ತಿ ವಿವರಗಳು:
• 2000 ರಲ್ಲಿ ಭಾರತೀಯ ಪಶುವೈದ್ಯಕೀಯ ಸಂಘದಿಂದ ಅತ್ಯುತ್ತಮ ಸಂಶೋಧನಾ ಲೇಖನಕ್ಕಾಗಿ ಡಾ. ಟಿ. ಪ್ರಭಾಕರನ್ ಸ್ಮಾರಕ ಪ್ರಶಸ್ತಿ,
• 2014 ರಲ್ಲಿ ಸಂಸ್ಕೃತಿ ಪ್ರಕಾಶನ, ಬಳ್ಳಾರಿ ಅವರಿಂದ ಡಾ. ಎಚ್. ಎನ್. ಪ್ರಶಸ್ತಿ,
• 2019 ರಲ್ಲಿ ಇಂಟರ್‍ನ್ಯಾಷನಲ್ ಇನ್‍ಸ್ಟಿಟ್ಯೂಟ್ ಫಾರ್ ಸೋಷಿಯಲ್ ಅಂಡ್ ಎಕನಾಮಿಕ್ ರಿಫಾಮ್ರ್ಸ್ ಅವರಿಂದ ಬೋಧನೆ, ಸಂಶೋಧನೆ ಮತ್ತು ಪ್ರಕಟಣೆಯಲ್ಲಿ ಜೀವಮಾನ ಸಾಧನೆಗಾಗಿ ಡಾ. ಎ. ಪಿ. ಜೆ. ಅಬ್ದುಲ್ ಕಲಾಮ್ ಪ್ರಶಸ್ತಿ.
• 2016, 2019, 2019, 2020, 2020, 2020, 2021, 2021, 2022, 2023 ಒಟ್ಟು ಹತ್ತು ಸಾರಿ ಅಗ್ರಿಕಲ್ಚರಲ್ ರೀಸರ್ಚ್ ಕಮ್ಮುನಿಕೇಷನ್ ಸೆಂಟರ್ ಅವರಿಂದ ರಿವ್ಯೂವರ್ ಎಕ್ಸಲ್ಲೆನ್ಸ್ ಪ್ರಶಸ್ತಿ .
• 2020 ಆದರ್ಶ್ ವಿದ್ಯಾ ಸರಸ್ವತಿ ರಾಷ್ಟ್ರೀಯ ಪುರಸ್ಕಾರ ಪಡೆದಿದ್ದಾರೆ.

ಜಂಟಿಯಾಗಿ ದೊರೆತ ಪ್ರಶಸ್ತಿಗಳು :

• ಭಾರತೀಯ ಪಶುವೈದ್ಯಕೀಯ ಮತ್ತು ವಿಷಶಾಸ್ತ್ರ ಸೊಸೈಟಿಯಿಂದ 2005 ರಲ್ಲಿ ಉತ್ತಮ ಬಿತ್ತಿಚಿತ್ರ ಪ್ರಶಸ್ತಿ,
• ಬಿಲ್ ಅಂಡ್ ಮೆಲಿಂದಾ ಗೇಟ್ಸ್ ಅವರಿಂದ 2016 ರಲ್ಲಿ ಭಾರತ ಮತ್ತು ಆಗ್ನೇಯ ಏಶಿಯಾ ಯುವ ಸಂಶೋಧನಾ ಪ್ರಶಸ್ತಿ,
• ಅನಿಮಲ್ ಫಿಶಿಯಾಲಜಿಸ್ಟ್ ಅಸೋಸಿಯೇಷನ್ ಅವರಿಂದ 2019 ರಲ್ಲಿ ಉತ್ತಮ ಬಿತ್ತಿಚಿತ್ರ ಪ್ರಶಸ್ತಿ,
• ವಲ್ರ್ಡ್ ವೆಟರಿನರಿ ಪೌಲ್ಟ್ರಿ ಅಸೋಸಿಯೇಷನ್ (ಇಂಡಿಯಾ) ಅವರಿಂದ 2020 ರಲ್ಲಿ ಉತ್ತಮ ಬಿತ್ತಿಚಿತ್ರ ಪ್ರಶಸ್ತಿ.

ಪ್ರಕಟಣೆಗಳು
• ಸಂಶೋಧನಾ ಪ್ರಕಟಣೆಗಳು: 101
• ವಿಸ್ತರಣೆ-69
• ಇನ್ನಿತರ ಲೇಖನಗಳು-89
• ಪುಸ್ತಕಗಳು : 07.

ಮಿಂಚಂಚೆ (email): mns263@yahoo.com
ಮೊಬೈಲ್ ಸಂಖ್ಯೆ: 7338100277, 9880937763