ಪಶುಸಂಗೋಪನಾ ಪಾಲಿಟೆಕ್ನಿಕ್, ಶಿಗ್ಗಾಂವ್
ಈ ಸಂಸ್ಥೆಯು ದಿನಾಂಕ 03.09.2012 ರಲ್ಲಿ ಶಿಗ್ಗಾಂವಿಯಲ್ಲಿ ಹಳೇ ಕೋರ್ಟ್ ಆವರಣದ ಕಟ್ಟಡದಲ್ಲಿ ಕಾರ್ಯಾರಂಭ ಮಾಡಿತು. ದಿನಾಂಕ 22.03.2018 ರಂದು ಕುನ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸ್ಥಳಾಂತರಗೊಂಡಿದೆ.
ಹತ್ತನೇ ತರಗತಿ ಪೂರ್ಣಗೊಳಿಸಿದ ಗ್ರಾಮೀಣ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ (ನಾಲ್ಕು ಸೆಮಿಸ್ಟರ್) ‘ಪಶು ಸಂಗೋಪನಾ ಡಿಪ್ಲೊಮಾ’ಕ್ಕಾಗಿ ಬೋಧನೆ ಹಾಗೂ ತರಬೇತಿಯನ್ನು ನೀಡಲಾಗುತ್ತಿದೆ. ಬೋಧನಾ ಮಾಧ್ಯಮವು ಕನ್ನಡವಾಗಿದ್ದು ಇದೊಂದು ಸ್ವಯಂ ಉದ್ಯೋಗಕ್ಕಾಗಿ ಸರ್ಕಾರದಿಂದ ತೆರೆಯಲ್ಪಟ್ಟ ಸಂಸ್ಥೆಯಾಗಿದೆ. ಸುಮಾರು 25 ಎಕರೆ ಪ್ರದೇಶದಲ್ಲಿ ಹೈನುರಾಸು, ಆಡು ಮತ್ತು ಕುರಿ ಘಟಕಗಳಿವೆ. ಮುಧೋಳ ತಳಿಯ ಶ್ವಾನಗಳನ್ನು ಸಹ ಸಾಕಲಾಗುತ್ತಿದೆ. ಒಂದು ಎಕರೆ ವಿಸ್ತೀರ್ಣದಲ್ಲಿ ವಿವಿಧ ಮೇವಿನ ತಳಿಗಳ ಪ್ರಾತ್ಯಕ್ಷಿಕೆಯ ಘಟಕವಿದೆ. ಪಶುಸಂಗೋಪನೆಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಅಗತ್ಯವಾದ ವಿವಿಧ ಪ್ರಾಣಿಗಳ ಸಾಕಾಣಿಕೆ ಹಾಗೂ ಮೇವಿನ ಉತ್ಪಾದನೆಯಲ್ಲಿ ವಿದ್ಯಾರ್ಥಿಗಳು ಅನುಭವವನ್ನು ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿರುವ ರೈತ ತರಬೇತಿ ಕೇಂದ್ರದಿಂದ 300ಕ್ಕೂ ಹೆಚ್ಚು ರೈತರು ತರಬೇತಿ ಪಡೆದಿರುತ್ತಾರೆ. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯಗಳಿವೆ.
ಸಿಬ್ಬಂದಿಗಳ ವಿವರ:
ಪ್ರಾಚಾರ್ಯರು
ಡಾ. ಶಂಭುಲಿಂಗಪ್ಪ ವೈ. ಬಡ್ಡಿ
ಎಂ.ವಿ.ಎಸ್ಸಿ., ಪಿ.ಹೆಚ್.ಡಿ.
ಮಿಂಚಂಚೆ: tigershambhu@gmail.com
ಮೊಬೈಲ್ ಸಂಖ್ಯೆ: 8217371053
ವೃತ್ತಿ ವಿವರ:
ಎರಡು ವರ್ಷ ಪಶುವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಆರು ವರ್ಷಗಳ ಸ್ನಾತಕ ಮತ್ತು 3 ವರ್ಷಗಳ ಕಾಲ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದ ಅನುಭವವಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. 2019 ರಿಂದ ಪಶುಸಂಗೋಪನಾ ಪಾಲಿಟೆಕ್ನಿಕ್‍ನಲ್ಲಿ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಶಸ್ತಿ ವಿವರ:
ಮಾನ್ಯತೆ ಪಡೆದ ಪದಕಗಳು ಮತ್ತು ಪ್ರಶಸ್ತಿಗಳ ವಿವರ |
ವರ್ಷ |
ರಾಜ್ಯ ಪುರಸ್ಕಾರ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ಸರ್ಕಾರ |
1996 |
ರಾಷ್ಟ್ರಪತಿ ಪುರಸ್ಕಾರ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸರ್ಕಾರ |
1999 |
ಐಎವಿಎ ಬೆಳ್ಳಿ ಮಹೋತ್ಸವ ಚಿನ್ನದ ಪದಕ ಮತ್ತು ಅತ್ಯುತ್ತಮ ಭಿತ್ತಿಚಿತ್ರ ಪ್ರಶಸ್ತಿ, ಪಶುವೈದ್ಯಕೀಯ ಅಂಗರಚನಾ ಶಾಸ್ತ್ರಜ್ಞರ ಭಾರತೀಯ ಸಂಘ. |
2008 |
ಡಾ. ಶ್ರೀವಾಸ್ತವ ಚಿನ್ನದ ಪದಕ ಮತ್ತು ಅಂಗರಚನಾ ಶಾಸ್ತ್ರದಲ್ಲಿ ಅತ್ಯುತ್ತಮ ಎಮ್‍ವಿಎಸ್‍ಸಿ ಸಂಶೋಧನೆಗಾಗಿ ಪ್ರಶಸ್ತಿ, ಪಶುವೈದ್ಯಕೀಯ ಅಂಗರಚನಾ ಶಾಸ್ತ್ರಜ್ಞರ ಭಾರತೀಯ ಸಂಘ |
2009 |
ಯುವ ವಿಜ್ಞಾನಿ ಪ್ರಶಸ್ತಿ ಸ್ವದೇಶಿ ವಿಜ್ಞಾನ ಆಂದೋಲನ, ಕರ್ನಾಟಕ ವಿಜ್ಞಾನ ಸಮ್ಮೇಳನ, ಕರ್ನಾಟಕ. |
2010 |
ಅತ್ಯುತ್ತಮ ಸಂಶೋಧನಾ ಪ್ರಬಂಧ, ಭಾರತೀಯ ಮೃಗಾಲಯ ಮತ್ತು ವನ್ಯಜೀವಿ ಪಶುವೈದ್ಯರ ಸಂಘ |
2011 |
ಅತ್ಯುತ್ತಮ ಭಿತ್ತಿಚಿತ್ರ ಪ್ರಸ್ತುತಿ, ಭಾರತೀಯ ಮೃಗಾಲಯ ಮತ್ತು ವನ್ಯಜೀವಿ ಪಶುವೈದ್ಯರ ಸಂಘ |
2011 |
ಅತ್ಯುತ್ತಮ ವಿದ್ಯಾರ್ಥಿ ಕ್ಲಿನಿಕಲ್ ಕೇಸ್ ಪ್ರಸ್ತುತಿ, ಅಂತರಾಷ್ಟ್ರೀಯ ವಿಚಾರ ಸಂಕೀರ್ಣ ಮತ್ತು ಕೃಷಿ ಮತ್ತು ಸಹವರ್ತಿ ಪ್ರಾಣಿ ಅಭ್ಯಾಸದಲ್ಲಿ 3 ನೇ ರಾಷ್ಟ್ರೀಯ ಕ್ಲಿನಿಕಲ್ ಕೇಸ್ ಕಾನ್ಪರೆನ್ಸ್, ಮದ್ರಾಸ್ ಪಶುವೈದ್ಯಕೀಯ ಕಾಲೇಜು |
2011 |
ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿ, ಪಶುವೈದ್ಯಕೀಯ ಅಂಗರಚನಾಶಾಸ್ತ್ರಜ್ಞರ ಭಾರತೀಯ ಸಂಘ |
2015 |
ಯುವ ವಿಜ್ಞಾನಿ ಪ್ರಶಸ್ತಿ, ಪಶುವೈದ್ಯಕೀಯ ಅಂಗರಚನಾ ಶಾಸ್ತ್ರಜ್ಞರ ಭಾರತೀಯ ಸಂಘ |
2015 |
ವಿಶ್ವವಿದ್ಯಾಲಯದ ಚಿನ್ನದ ಪದಕ, ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ, ಕರ್ನಾಟಕ |
2015 |
ವೈದ್ಯಸಂಜೀವಿನಿ ಪ್ರಶಸ್ತಿ, ಗಾನ ಗಂಧರ್ವ ಕಲಾ ಸಂಘ, ಗದಗ |
2016 |
ಪ್ರಕಟಣೆಗಳು : ಸಂಶೋಧನೆ/ ವಿಸ್ತರಣೆ/ ಇನ್ನಿತರ ಲೇಖನಗಳು : 20
ಸಂಪರ್ಕಿಸಿ:
ಪ್ರಾಂಶುಪಾಲರು,
ಪಶುಸಂಗೋಪನಾ ಪಾಲಿಟೆಕ್ನಿಕ್, ಶಿಗ್ಗಾಂವ್
ಹಾವೇರಿ ಜಿಲ್ಲೆ
ಕರ್ನಾಟಕ-581193
ಮಿಂಚಂಚೆ: ahpshiggaon@gmail.com
ಮೊಬೈಲ್ ಸಂಖ್ಯೆ: 82173-71053