ಪಶು ಸಂಗೋಪನಾ ಪಾಲಿಟೆಕ್ನಿಕ್, ಕೋರವಂಗಲ ಗೇಟ್, ಚಿಕ್ಕಕಡಲೂರು, ಹಾಸನ
ಸರ್ಕಾರದ ಆದೇಶ ಸಂ: ಪಸಂಮೀ 78 ಪಸಸೇ 2017, ಬೆಂಗಳೂರು, ದಿನಾಂಕ: 16.05.2017 ರನ್ವಯ ಈ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಹತ್ತನೇ ತರಗತಿ ಪೂರ್ಣಗೊಳಿಸಿದ ಗ್ರಾಮೀಣ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ (ನಾಲ್ಕು ಸೆಮಿಸ್ಟರ್) ‘ಪಶು ಸಂಗೋಪನಾ ಡಿಪ್ಲೊಮಾ’ ಪ್ರಮಾಣ ಪತ್ರವನ್ನು ನೀಡುತ್ತಿದೆ.
ಸಿಬ್ಬಂದಿಗಳ ವಿವರ:
ಸಹಾಯಕ ಪ್ರಾಧ್ಯಾಪಕರು
ಡಾ. ಗುರುಪ್ರಸಾದ್, ಆರ್
ಎಮ್.ವಿ.ಎಸ್‍ಸ್ಸಿ., ಪಿ.ಹೆಚ್.ಡಿ.
ಮಿಂಚಂಚೆ: gurupsd16@gmail.com
ಮೊಬೈಲ್ ಸಂಖ್ಯೆ: +91-9900796095
ವೃತ್ತಿ ವಿವರ:
ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯನ್ನು ಪಶು ವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು ಇಲ್ಲಿಂದ ಪೂರ್ಣಗೊಳಿಸಿ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಐದೂವರೆ ವರ್ಷಗಳ ಸೇವೆಯನ್ನು ಸಲ್ಲಿಸಿರುತ್ತಾರೆ. ದಿನಾಂಕ 07.12.2011 ರಂದು ವಿಶ್ವವಿದ್ಯಾಲಯದ ಸೇವೆಗೆ ಸೇರಿ, ಪಶುವೈದ್ಯಕೀಯ ಮಹಾವಿದ್ಯಾಲಯ, ಹಾಸನದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ 31.07.2019 ರವರೆಗೆ ಕಾರ್ಯನಿರ್ವಹಿಸಿರುತ್ತಾರೆ. ಪ್ರಸ್ತುತ, ಪಶು ಸಂಗೋಪನಾ ಪಾಲಿಟೆಕ್ನಿಕ್, ಕೋರವಂಗಲ ಗೇಟ್, ಚಿಕ್ಕಕಡಲೂರು, ಹಾಸನದ ಪ್ರಾಂಶುಪಾಲರಾಗಿ ಮತ್ತು ಕರ್ನಾಟಕ ಸರ್ಕಾರದ ಪ್ರಾಯೋಜಿತ ಯೋಜನೆಯಾದ ‘ಹಾಸನ ಕುರಿ ತಳಿ ಸಂರಕ್ಷಣೆ’ಯ ಪ್ರಧಾನ ಸಂಶೋಧಕರಾಗಿದ್ದಾರೆ.
ಪ್ರಶಸ್ತಿ ವಿವರ:
ಎಂ.ವಿ.ಎಸ್.ಸಿ. (2005) ಮತ್ತು ಪಿ.ಹೆಚ್.ಡಿ. (2018) ಪದವಿಗಾಗಿ ವಿಶ್ವವಿದ್ಯಾಲಯದ ಚಿನ್ನದ ಪದಕ.
IMRF ಯುವ ವಿಜ್ಞಾನಿ ಪ್ರಶಸ್ತಿ.
ಪ್ರಕಟಣೆಗಳು : ಸಂಶೋಧನೆ / ವಿಸ್ತರಣೆ / ಇನ್ನಿತರ ಲೇಖನಗಳು: 15
ಸಂಪರ್ಕಿಸಿ:
ಪ್ರಾಂಶುಪಾಲರು,
ಪಶುಸಂಗೋಪನಾ ಪಾಲಿಟೆಕ್ನಿಕ್, ಕೋರವಂಗಲ ಗೇಟ್, ಚಿಕ್ಕಕಡಲೂರು, ಹಾಸನ
ಕರ್ನಾಟಕ-573 118
ಮಿಂಚಂಚೆ: gurupsd16@gmail.com
ಮೊಬೈಲ್ ಸಂಖ್ಯೆ: 9900796095