+91-8482-245241 regkvafsu@gmail.com

ಎಮ್ಮೆ ಸಂಶೋಧನೆ ಹಾಗೂ ಮಾಹಿತಿ ಕೇಂದ್ರ, ದೋರನಹಳ್ಳಿ, ಯಾದಗಿರಿ

ಎಮ್ಮೆ ಸಂಶೋಧನೆ ಹಾಗೂ ಮಾಹಿತಿ ಕೇಂದ್ರ, ದೋರನಹಳ್ಳಿ, ಯಾದಗಿರಿ, ಸಂಸ್ಥೆಯು 2011 ರಲ್ಲಿ ಆರಂಭವಾಗಿದೆ. ಸುಮಾರು 80 ಎಕರೆ ವಿಶಾಲವಾದ ಪ್ರದೇಶದಲ್ಲಿ ಸಂಸ್ಥೆಯಿದೆ. ಉತ್ಕøಷ್ಟ ಮುರ್ರಾ ಎಮ್ಮೆಗಳನ್ನು ಸಾಕುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಈ ಭಾಗದ ಆಸಕ್ತ ರೈತರಿಗೆ ಜಾನುವಾರು ಉತ್ಪಾದನೆ, ವಿಶೇಷವಾಗಿ ಎಮ್ಮೆ ಉತ್ಪಾದನೆ ಕುರಿತು ಮಾಹಿತಿ ವಿನಿಮಯ ಮಾಡುತ್ತಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆ ನೀರಾವರಿ ಸೌಲಭ್ಯದ ಮೂಲಕ ವರ್ಷದ 9 ರಿಂದ 10 ತಿಂಗಳು ನೀರು ಲಭ್ಯವಿರುತ್ತದೆ. ವಿಧದ ಮೇವಿನ ಬೆಳೆಗಳನ್ನು ಪ್ರಾತ್ಯಕ್ಷಿಕೆ ಹಾಗೂ ಮಾರಾಟಕ್ಕಾಗಿ ಬೆಳೆಸಲಾಗುತ್ತಿದೆ.