+91-8482-245241 regkvafsu@gmail.com

ಪಶು ಶಸ್ತ್ರಚಿಕಿತ್ಸಾ ಮತ್ತು ಕ್ಷ-ಕಿರಣ ವಿಜ್ಞಾನ ವಿಭಾಗ

ಪಶು ಶಸ್ತ್ರಚಿಕಿತ್ಸಾ ಮತ್ತು ಕ್ಷ-ಕಿರಣ ವಿಜ್ಞಾನ ವಿಭಾಗವು 1960ರಲ್ಲಿ ಆಗಿನ ಸೀರಮ್ ಇನ್‍ಸ್ಟಿಟ್ಯೂಟ್‍ನಲ್ಲಿ ಪ್ರಾಧ್ಯಾಪಕರಾಗಿದ್ದ ಡಾ.ಮಲ್ಲಿಯವರ ಮುಂದಾಳತ್ವದಲ್ಲಿ ಆರಂಭವಾಗಿ 1973ರಲ್ಲಿ ಸ್ನಾತಕೋತ್ತರ ಪದವಿಯಾದ ಎಮ್.ವಿ.ಎಸ್‍ಸಿ. ಪದವಿಯನ್ನು ಶುರುಮಾಡಿ, ತದನಂತರ 2003 ರಲ್ಲಿ ಸ್ನಾತಕೋತ್ತರ ಪದವಿಯಾದ ಪಿ.ಹೆಚ್.ಡಿ. ಪದವಿಯನ್ನು ಪ್ರಾರಂಭಿಸಲಾಯಿತು. ಪ್ರಾರಂಭದ ದಿನದಿಂದ ಇಂದಿನವರೆಗೂ ಜಾನುವಾರು ಸಾಕಾಣಿಕೆದಾರರ ಸಮಸ್ಯೆಗಳನ್ನು ಪರಿಹರಿಸಿ, ಹೊಸಹೊಸ ಆವಿಷ್ಕಾರಗಳನ್ನು ಕೈಗೊಂಡು, ಅವುಗಳನ್ನು ರೈತರಿಗೆ ತಲುಪಿಸುವಲ್ಲಿ, ನುರಿತ ಪಶುವೈದ್ಯರನ್ನು ತಯಾರು ಮಾಡುವಲ್ಲಿ ಸಕ್ರಿಯ ಪಾತ್ರವನ್ನು ವಹಿಸುತ್ತಿದೆ. ವಿಭಾಗದಲ್ಲಿ ದೊರೆಯುವ ಸೌಲಭ್ಯಗಳು: ಸಾಕು ಹಾಗೂ ಮುದ್ದಿನ ಪ್ರಾಣಿಗಳಿಗೆ ಹೊರ ರೋಗಿಗಳ ಚಿಕಿತ್ಸೆ, ಕ್ಷ-ಕಿರಣ ಸೌಲಭ್ಯ; ಸಾಕು ಹಾಗೂ ಮುದ್ದಿನ ಪ್ರಾಣಿಗಳಲ್ಲಿನ ವಿವಿಧ ರೋಗಗಳಿಗೆ ಶಸ್ತ್ರಚಿಕಿತ್ಸೆ ಕೈಗೊಳ್ಳಲು ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿಗಳು, ಇತ್ಯಾದಿ.