+91-8482-245241 regkvafsu@gmail.com

ಪಶುವೈದ್ಯಕೀಯ ರೋಗ ವಿಜ್ಞಾನ ವಿಭಾಗ

ವಿಭಾಗದ ಮುಖ್ಯಸ್ಥರಾಗಿ ಡಾ. ಎಸ್. ಮೊಹಿಯುದ್ದೀನ್, ಡಾ. ಎಸ್. ಜೆ. ಶೇಷಾದ್ರಿ, ಡಾ. ಆರ್. ಎನ್. ಶ್ರೀನಿವಾಸ ಗೌಡ, ಡಾ. ಎಸ್. ಕೆ. ವಿಜಯಸಾರಥಿ, ಡಾ. ಎಂ. ಎಲ್. ಸತ್ಯನಾರಾಯಣ ಮತ್ತು ಡಾ. ಎಚ್. ಡಿ. ನಾರಾಯಣ ಸ್ವಾಮಿ ಅವರು ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ, ಡಾ. ಸುಗುಣಾ ರಾವ್ ಅವರು ವಿಭಾಗದ ಮುಖ್ಯಸ್ಥರಾಗಿದ್ದಾರೆ.

ಪಶುವೈದ್ಯಕೀಯ ರೋಗ ವಿಜ್ಞಾನ ವಿಭಾಗವು ಬಿ.ವಿ.ಎಸ್ಸಿ ಮತ್ತು ಎ.ಎಚ್. ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ ಬೋಧಿಸುತ್ತದೆ. ರೋಗಶಾಸ್ತ್ರ, ಹಿಸ್ಟೊಪೆಥಾಲಜಿ ಮತ್ತು ಆಣ್ವಿಕ ರೋಗಶಾಸ್ತ್ರೀಯ ಅಧ್ಯಯನಗಳಿಗೆ ಅಗತ್ಯವಾದ ಆಧುನಿಕ ಸಾಧನಗಳನ್ನು ವಿಭಾಗವು ಹೊಂದಿದೆ. ರೋಗನಿರ್ಣಯ ಸೇವೆಗಳ ಕ್ಷೇತ್ರಗಳಲ್ಲಿ ರೈತರು, ಗ್ರಾಹಕರು ಮತ್ತು ಇತರ ವಿಭಾಗಗಳಿಗೆ ಸೇವೆಗಳನ್ನು ನೀಡಲಾಗುತ್ತಿದೆ. ದೊಡ್ಡ ಪ್ರಾಣಿಗಳು, ಸಣ್ಣ ಪ್ರಾಣಿಗಳು ಮತ್ತು ಕಾಡು ಪ್ರಾಣಿಗಳ ಶವಪರೀಕ್ಷೆ, ಸೈಟೋಪೆಥಾಲಜಿ, ಹಿಸ್ಟೊಪೆಥಾಲಜಿ, ಕ್ಲಿನಿಕಲ್ ರೋಗಶಾಸ್ತ್ರ ಮತ್ತು ಕೋಳಿಗಳ ರೋಗನಿರ್ಣಯ ಮಾಡಲಾಗುತ್ತಿದೆ.