+91-8482-245241 regkvafsu@gmail.com

ಪ್ರಾಣಿ ತಳಿ ಅನುವಂಶೀಯತೆ ಮತ್ತು ತಳಿ ವಿಜ್ಞಾನ ವಿಭಾಗ

ಪ್ರಾಣಿ ತಳಿ ಅನುವಂಶೀಯತೆ ಮತ್ತು ತಳಿ ವಿಜ್ಞಾನ ವಿಭಾಗವು ಬೋಧನೆಯ ಜೊತೆಗೆ ಪರಿಮಾಣ್ಮಕ ಅನುವಂಶೀಯತೆ, ಆಣ್ವಿಕ ಅನುವಂಶೀಯತೆ, ಕೋಶ ಅನುವಂಶೀಯತೆ, ಜೀವರಾಸಾಯನಿಕ ಅನುವಂಶೀಯತೆ ಮತ್ತು ಜೈವಿಕ ಮಾಹಿತಿ ತಂತ್ರಜ್ಞಾನದ ಕ್ಷೇತ್ರಗಳ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದೆ. 1972ರಲ್ಲಿ ಸ್ನಾತಕೋತ್ತರ ಹಾಗೂ 1979ರಲ್ಲಿ ಡಾಕ್ಟರಲ್ ಪದವಿಯನ್ನು ಪ್ರಾರಂಭಿಸಲಾಯಿತು. ಇದುವರೆಗೆ ಒಟ್ಟು 91 ಸ್ನಾತಕೋತ್ತರ ಮತ್ತು 32 ಡಾಕ್ಟರಲ್ ಪದವಿಗಳನ್ನು ನೀಡಲಾಗಿದೆ.

ರೈತರಿಗೆ ಮತ್ತು ಪಶುವೈದ್ಯರಿಗೆ ಅನುಕೂಲವಾಗುವಂತೆ ಅನೇಕ ತರಬೇತಿ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ಮತ್ತು ಪಶುಮೇಳ ಹಾಗೂ ಜಾನುವಾರು ಪ್ರದರ್ಶನಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಆಕಾಶವಾಣಿ ಹಾಗೂ ದೂರದರ್ಶನದ ಮೂಲಕ ರೈತರಿಗೆ ಅಗತ್ಯವಾದ ಮಾಹಿತಿಯನ್ನು ಕಾಲಕಾಲಕ್ಕೆ ನೀಡಲಾಗುತ್ತಿದೆ.