ಪ್ರಾಣಿ ಆಹಾರ ವಿಜ್ಞಾನ ವಿಭಾಗ
ಪ್ರಾಣಿ ಆಹಾರ ವಿಜ್ಞಾನ ವಿಭಾಗವು ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಸಂಬಂಧಿಸಿದಂತೆ ಬೋಧನಾ ಮತ್ತು ಮಾರ್ಗದರ್ಶನ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ವಿಭಾಗವು ಹೈನುರಾಸುಗಳು, ಕುರಿ - ಮೇಕೆಗಳು ಹಾಗೂ ಸರಳ ಹೊಟ್ಟೆಯ ಪ್ರಾಣಿಗಳ ಸಂಶೋಧನೆಗೆ ಬೇಕಾದ ಸೌಲಭ್ಯಗಳನ್ನು ಹೊಂದಿದೆ. ಕಳೆದ 50 ವರ್ಷಗಳಿಂದ ಪಶು ಆಹಾರ ವಿಜ್ಞಾನ ವಿಭಾಗವು ಮೂಲಭೂತ ಹಾಗೂ ಅನ್ವಯಿಕ ಪಶು ಆಹಾರಶಾಸ್ತ್ರದ ಸಂಶೋಧನಾ ಯೋಜನೆಗಳನ್ನು ಕೈಗೊಂಡಿದೆ. ಎ.ಆರ್.ಸಿ., ಎನ್.ಆರ್.ಸಿ ಹಾಗೂ ಭಾ.ಕೃ.ಅ.ಪ. ಜಾನುವಾರುಗಳಿಗೆ ಶಿಫಾರಸ್ಸು ಮಾಡುವ ಮಾರ್ಗಸೂಚಿಗಳನ್ನು ಸೂಕ್ತವಾಗಿ ಅಳವಡಿಸಿಕೊಳ್ಳುವ ಬಗ್ಗೆ ಸಂಶೋಧನೆಗಳನ್ನು ಮಾಡಿದೆ. ‘ವಿಭಜನಾ ಅಂಶ’ ಹಾಗೂ ‘ಸೂಕ್ಷ್ಮಜೀವಿಗಳ ಜೀವರಾಶಿ’ ಆಧಾರದ ಮೇಲೆ ಮೆಲುಕು ಹಾಕುವ ಪ್ರಾಣಿಗಳ ಆಹಾರದ ಮೌಲ್ಯಮಾಪನ, ಜಾನುವಾರುಗಳಿಗೆ ಅಸಂಪ್ರದಾಯಿಕ ಸಂಪನ್ಮೂಲಗಳ ಮೌಲ್ಯಮಾಪನ, ಸಂಸ್ಕರಣೆ ಮತ್ತು ಬಳಕೆ, ಮತ್ತು ಮೇವಿನ ಸಮರ್ಪಕ ಬಳಕೆ ಹಾಗೂ ಉತ್ಪಾದನಾ ತಂತ್ರಜ್ಞಾನಗಳಲ್ಲಿ ಸಂಶೋಧನೆ ಮಾಡಲಾಗಿದೆ. ಪಶು ಆಹಾರ ವಿಜ್ಞಾನದ ಸಂಶೋಧನಾ ಫಲಿತಾಂಶಗಳನ್ನು ಸಾರ್ವಜನಿಕರಿಗೆ ಹಾಗೂ ಕೃಷಿಕರಿಗೆ ತಲುಪಿಸುವ ನಿಟ್ಟಿನಲ್ಲಿ ವಿಸ್ತರಣಾ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಳ್ಳಲಾಗಿದೆ.