ಪಶುವೈದ್ಯಕೀಯ ಮತ್ತು ಪಶುಪಾಲನಾ ವಿಸ್ತರಣ ಶಿಕ್ಷಣ ವಿಭಾಗ
ಭಾರತೀಯ ಪಶುವೈದ್ಯಕೀಯ ಪರಿಷತ್ತಿನ ಶಿಕ್ಷಣ ನೀತಿ ಅನ್ವಯ 1995 ರಲ್ಲಿ ಪಶುವೈದ್ಯಕೀಯ ಹಾಗೂ ಪಶು ಸಂಗೋಪನಾ ವಿಸ್ತರಣಾ ಶಿಕ್ಷಣ ವಿಭಾಗವು ಅಸ್ತಿತ್ವಕ್ಕೆ ಬಂದಿತು. ಸ್ನಾತಕೋತ್ತರ ಶಿಕ್ಷಣವನ್ನು 2009-2010 ರಲ್ಲಿ ಪ್ರಾರಂಭಿಸಲಾಯಿತು. ಈವರೆಗೆ 19 ವಿದ್ಯಾರ್ಥಿಗಳು ಈ ವಿಭಾಗದಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ರೈತ ಸಮುದಾಯಕ್ಕೆ ಅನುಕೂಲವಾಗುವಂತೆ ವಿಭಾಗದಿಂದ ಇದುವರೆಗೆ ಎರಡು ಮೊಬೈಲ್ ಆಪ್‍ಗಳನ್ನು (ಹೈನುಗಾರಿಕೆ ಹಾಗೂ ಮೇವಿನ ಬೆಳೆಗಳು) ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಾಗಿದೆ. ಮಹಾವಿದ್ಯಾಲಯದಿಂದ ಅಳವಡಿಸಿಕೊಂಡ ದತ್ತುಗ್ರಾಮಗಳಲ್ಲಿ ಪಶುಸಂಗೋಪನಾ ಚಟುವಟಿಕೆಗಳ ಸಂಯೋಜನೆಯನ್ನು ಮಾಡಲಾಗುತ್ತಿದೆ. ರೈತರಿಗೆ ಪಶುಸಂಗೋಪನಾ ಪದ್ಧತಿಗಳ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಲಾಗುತ್ತಿದೆ. 2012 ರಿಂದ ಪ್ರತಿ ತಿಂಗಳು ಈ ಬುಲೆಟಿನ್-“ಪಶುಬಂಧ“ವನ್ನು ಹೊರ ತರಲಾಗುತ್ತಿದ್ದು 1000 ಕ್ಕೂ ಹೆಚ್ಚು ಪಶುವೈದ್ಯರಿಗೆ ನಿಯಮಿತವಾಗಿ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಕ್ಷೇತ್ರದ ಅಗತ್ಯ ಹಾಗೂ ಹೊಸ ಮಾಹಿತಿಗಳನ್ನು ಕೊಡಲಾಗುತ್ತಿದೆ.