+91-8482-245241 regkvafsu@gmail.com

ಪಶುವೈದ್ಯಕೀಯ ಪರೋಪಜೀವಿ ವಿಜ್ಞಾನ ವಿಭಾಗ

ವಿಭಾಗದ ಮುಖ್ಯಸ್ಥರಾಗಿ 1960 ರಿಂದ 2021 ರವರೆಗೆ ವಿವಿಧ ಅವಧಿಗಳಲ್ಲಿ ಕ್ರಮವಾಗಿ ಡಾ. ಎನ್. ಎಸ್. ಕೃಷ್ಣರಾವ್, ಡಾ. ಕೆ. ಎಸ್. ಹೆಗ್ಡೆ, ಡಾ. ಎಲ್. ಎಸ್. ಹಿರೇಗೌಡರ್, ಡಾ. ಎಸ್. ಅಬ್ದುಲ್ ರಹಮಾನ್, ಡಾ. ಎಂ. ಎಸ್. ಜಗನ್ನಾಥ್, ಡಾ. ಪ್ಲಾಸಿಡ್ ಇ. ಡಿಸೋಜ, ಡಾ. ತಿಮ್ಮಾರೆಡ್ಡಿ, ಡಾ. ಎಚ್. ಧನಲಕ್ಷ್ಮಿ ಮತ್ತು ಡಾ. ಕೆ. ಜೆ. ಆನಂದ ಅವರು ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ, ಡಾ. ಎಚ್. ಧನಲಕ್ಷ್ಮಿ ಅವರು ವಿಭಾಗದ ಮುಖ್ಯಸ್ಥರಾಗಿದ್ದಾರೆ.

ಐದನೇ ಪಂಚವಾರ್ಷಿಕ ಯೋಜನೆಯಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನವರ ಪ್ರಾಯೋಜನೆಯಂತೆ ಸೆಂಟರ್ ಫಾರ್ ಅಡ್ವಾನ್ಸ್ಡ್ ಫ್ಯಾಕಲ್ಟಿ ಟ್ರೈನಿಂಗ್ ಆರಂಭವಾಯಿತು. ಇದರ ಮುಖ್ಯ ಉದ್ದೇಶಗಳು ವಿಜ್ಞಾನಿಗಳು ಹಾಗೂ ಶಿಕ್ಷಕರ ಸಾಮಥ್ರ್ಯ ವರ್ಧನೆ, ಉನ್ನತ ಸಂಶೋಧನೆ ಮತ್ತು ಸೂಚನಾ ವಸ್ತುಗಳ ಅಭಿವೃದ್ಧಿಯಾಗಿವೆ. ವಿಭಾಗದಲ್ಲಿ 1995 ರಿಂದ ಇಲ್ಲಿಯವರೆಗೆ ಅಧ್ಯಾಪಕರು ಮತ್ತು ವಿಜ್ಞಾನಿಗಳಿಗಾಗಿ ಒಟ್ಟು 37 ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ 23 ರಾಷ್ಟ್ರೀಯ ತರಬೇತಿ ಕಾರ್ಯಕ್ರಮಗಳು. ಮೂವತ್ತೇಳು ಕಂಪೆಂಡಿಯಮ್ ಮತ್ತು ಪ್ರಾಯೋಗಿಕ ಕೈಪಿಡಿಗಳನ್ನು ಪ್ರಕಟಿಸಲಾಗಿದೆ. 23 ವೈಜ್ಞಾನಿಕ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಉತ್ತಮ ಗ್ರಂಥಾಲಯ, ಸಂಶೋಧನಾ ಮೂಲಸೌಕರ್ಯ ಮತ್ತು ತರಬೇತಿ ಸೌಲಭ್ಯಗಳಿವೆ.