+91-8482-245241 regkvafsu@gmail.com

ಪಶುವೈದ್ಯಕೀಯ ಜೀವರಸಾಯನ ವಿಜ್ಞಾನ ವಿಭಾಗ

ಬೆಂಗಳೂರಿನ ಪಶುವೈದ್ಯಕೀಯ ಜೀವರಸಾಯನ ವಿಭಾಗವನ್ನು ಭಾರತೀಯ ಪಶುವೈದ್ಯಕೀಯ ಪರಿಷತ್ತಿನ ಪಠ್ಯಕ್ರಮವು ಮೊಟ್ಟಮೊದಲಿಗೆ ಪ್ರಾರಂಭವಾದಾಗ 1994ರಲ್ಲಿ ಸ್ಥಾಪಿಸಲಾಯಿತು. ಡಾ. ಟಿ. ಆರ್. ಎಸ್. ರಂಗಾಚಾರ್ ಮೊದಲ ಮುಖ್ಯಸ್ಥರಾಗಿದ್ದರು. ನಂತರ ಡಾ. ಜಯಪ್ರಕಾಶ್, ಡಾ. ಟಿ. ವೀಣಾ, ಮತ್ತು ನಂತರ ಡಾ. ವಿ. ಗಿರೀಶ್ ಕುಮಾರ್ ರವರು ಮುಖ್ಯಸ್ಥರಾಗಿ ಮುಂದುವರೆದರು. ವಿಭಾಗವು ಪದವಿ, ಕ್ಲಿನಿಕಲ್ ಬಯೋಕೆಮಿಸ್ಟ್ರಿ ಮತ್ತು ಜೈವಿಕ ತಂತ್ರಜ್ಞಾನ ಪ್ರಯೋಗಾಲಯಗಳನ್ನು ಹೊಂದಿದೆ. ಎಂವಿಎಸ್ಸಿ ಮತ್ತು ಪಿಹೆಚ್‌ಡಿ ಅಧ್ಯಯನವು ಕ್ರಮವಾಗಿ 2010 ಮತ್ತು 2013 ರಲ್ಲಿ ಪ್ರಾರಂಭವಾಯಿತು. ಇಲ್ಲಿಯವರೆಗೆ, ಕ್ರಮವಾಗಿ 13 ಮತ್ತು 03 ವಿದ್ಯಾರ್ಥಿಗಳು ಎಂವಿಎಸ್ಸಿ ಮತ್ತು ಪಿಹೆಚ್‌ಡಿ ಪದವಿಗಳನ್ನು ಪೂರೈಸಿದ್ದಾರೆ. ಹೋರಿಗಳ ವೃಷಣಗಳಲ್ಲಿ ವರ‍್ಯ ಪಕ್ವತೆಯ ಪ್ರೋಟೀನುಗಳ ಉಪಸ್ಥಿತಿಯನ್ನು ಗುರುತಿಸಲಾಗಿದೆ. ಮತ್ತು ಸ್ಪರ್ಮಟೋಜೆನೆಸಿಸ್ ಮೇಲೆ ಫೈಟೊಈಸ್ಟ್ರೊಜೆನ್ ಗಳ ನಿಯಂತ್ರಿತ ರಿರ‍್ಸಿಬಲ್ ಅಡ್ಡಿಪಡಿಸುವ ಪರಿಣಾಮಗಳನ್ನು ಮೊದಲ ಬಾರಿಗೆ ಇಲಿಗಳಲ್ಲಿ ಗುರುತಿಸಲಾಗಿದೆ. ಈ ವಿಭಾಗವು 2017 ರಲ್ಲಿ ಜೈವಿಕ ರಸಾಯನಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ವಾರ್ಷಿಕ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿದೆ. 2013 ಮತ್ತು 2017 ರಲ್ಲಿ ದಕ್ಷಿಣ ವಲಯ ರಾಷ್ಟ್ರೀಯ ಪಶುವೈದ್ಯಕೀಯ ಶರೀರಶಾಸ್ತ್ರ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿದೆ. ಇಲ್ಲಿಯವರೆಗೆ, ಈ ವಿಭಾಗದಲ್ಲಿ ಸಿಬ್ಬಂದಿ ಮತ್ತು ಪಿಜಿ ವಿದ್ಯಾರ್ಥಿಗಳು ಜೀವಮಾನ ಸಾಧನೆ ಪ್ರಶಸ್ತಿ, ಯುವ ವಿಜ್ಞಾನಿ ಪ್ರಶಸ್ತಿ, ಅತ್ಯುತ್ತಮ ಮೌಖಿಕ ಮತ್ತು ಪೋಸ್ಟರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.