+91-8482-245241 regkvafsu@gmail.com

ಜಾನುವಾರು ಉತ್ಪನ್ನಗಳ ತಾಂತ್ರಿಕತೆ ವಿಭಾಗ

‘ಮಾಂಸ ವಿಜ್ಞಾನ’ ಎಂಬ ಹೆಸರಿನಲ್ಲಿ 1983ರಲ್ಲಿ ಪ್ರಾರಂಭಿಸಲಾದ ವಿಭಾಗವನ್ನು ಜಾನುವಾರು ಉತ್ಪನ್ನಗಳ ತಂತ್ರಜ್ಞಾನ ವಿಭಾಗ ಎಂದು 1994ರಲ್ಲಿ ಮರು ನಾಮಕರಣ ಮಾಡಲಾಯಿತು. ಡಾ. ಸುಬ್ಬರಾವ್, ಡಾ. ಸೈಯದ್ ಜಿಯಾವುದ್ದೀನ್ ಮತ್ತು ಡಾ. ನದೀಮ್ ಫೈರೋಜ್ ಅವರು ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಸೂಕ್ಷ್ಮಾಣುಜೀವಿಗಳ ಪತ್ತೆ, ಸಾಮಾನ್ಯವಾಗಿ ದಿನನಿತ್ಯದ ಆಹಾರದಿಂದ ಹರಡುವ ರೋಗಕಾರಕಗಳ ಆಣ್ವಿಕಗಳ ಗುರುತಿಸುವಿಕೆ, ಜಾನುವಾರು ಉತ್ಪನ್ನಗಳ ಸ್ವಜೀವಿತಾವಧಿಯನ್ನು ವಿಸ್ತರಿಸಲು ಹಾಗೂ ಮಾಂಸ ಮತ್ತು ಹಾಲಿನ ಉತ್ಪನ್ನಗಳ ವಿನ್ಯಾಸ ವಿಶ್ಲೇಷಣೆಗೆ ಅವಶ್ಯವಿರುವ ಸೌಲಭ್ಯಗಳು ಮತ್ತು ಉಪಕರಣಗಳನ್ನು ವಿಭಾಗವು ಹೊಂದಿರುತ್ತದೆ.

ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಉದ್ಯಮಿಗಳಿಗೆ ಪ್ರಾಯೋಗಿಕ ಪ್ರದರ್ಶನಕ್ಕಾಗಿ ಪ್ರತಿ ಘಂಟೆಗೆ 100 ಕೋಳಿಗಳನ್ನು ವಧೆ ಮಾಡಬಲ್ಲ ಕಸಾಯಿಖಾನೆಯನ್ನು ಹೊಂದಿದೆ. ಮಾಂಸದ ಶೇಖರಣಾವಧಿಯನ್ನು ಹೆಚ್ಚಿಸಲು ರಿಟಾರ್ಟ್ ಪ್ರಕ್ರಿಯೆ ಸೌಲಭ್ಯ ಹಾಗೂ ಸಂಸ್ಕರಿಸಿದ ಮಾಂಸ ಮತ್ತು ಮಾಂಸದ ಉತ್ಪನ್ನಗಳನ್ನು ಸಂಗ್ರಹಿಸಿಡಲು ಶೈತ್ಯಾಗಾರದ ವ್ಯವಸ್ಥೆಯಿದೆ.

ಮಾರುಕಟ್ಟೆಗಳಲ್ಲಿ ಸಂಗ್ರಹಿಸಿದ ಕೋಳಿ ಮಾಂಸದ ಮಾದರಿಗಳಲ್ಲಿ ಸೂಕ್ಷ್ಮಾಣುಜೀವಿಗಳ ಹೊರೆ, ಪ್ರತಿಜೈವಿಕ ಔಷಧಿಗಳ ಬಳಕೆ ಮತ್ತು ಅವುಗಳ ಉಳಿಕೆ ಪ್ರಮಾಣ, ಮಾಂಸಗಳಲ್ಲಿನ ಕೀಟನಾಶಕಗಳ ಪ್ರಮಾಣ, ಕೋಳಿ ಮಾಂಸದ ಉತ್ಪನ್ನಗಳಲ್ಲಿ ಸಾಲ್ಮೊನೆಲ್ಲಾ ಹಾಗೂ ಚಿಕನ್, ಮಟನ್ ಮಾದರಿಗಳಲ್ಲಿ ಲಿಸ್ಟೀರಿಯಾ ಕಂಡುಬಂದಿರುವುದನ್ನು ಪತ್ತೆ ಹಚ್ಚಲಾಗಿದೆ. ಸ್ವಚ್ಚ ಮಾಂಸ ಉತ್ಪಾದನೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರೇರೇಪಿಸಲು ಸಂವಾದ ಕಾರ್ಯಗಾರ, ರೈತರು ಹಾಗೂ ಅಧಿಕಾರಿಗಳನ್ನು ಒಳಗೊಂಡಂತೆ ಪ್ರದರ್ಶನಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕಸಾಯಿಖಾನೆ, ಮಾಂಸ ಸಂಸ್ಕರಣಾ ಘಟಕವನ್ನು ಸ್ಥಾಪಿಸಬಯಸುವ ಉದ್ಯಮಿಗಳಿಗೆ ಸಲಹೆ, ಸೂಚನೆಗಳನ್ನು ನೀಡುವುದರ ಮೂಲಕ ವಿಭಾಗದ ಸೇವೆಗಳನ್ನು ವಿಸ್ತರಿಸಲಾಗಿದೆ.