+91-8482-245241 regkvafsu@gmail.com

ಕುಕ್ಕುಟ ವಿಜ್ಞಾನ ವಿಭಾಗ

ಕುಕ್ಕುಟ ವಿಜ್ಞಾನ ವಿಭಾಗವು 1973 ರಲ್ಲಿ ಅಸ್ತಿತ್ವಕ್ಕೆ ಬಂದಿರುತ್ತದೆ. 1989 ರಲ್ಲಿ ಗಿರಿರಾಜ ತಳಿ ಹಾಗೂ 2007 ರಲ್ಲಿ ಸ್ವರ್ಣಧಾರಾ ತಳಿಗಳನ್ನು ಬಿಡುಗಡೆ ಮಾಡಿದೆ. ಈ ತಳಿಗಳು ರಾಷ್ಟ್ರಮಟ್ಟದ ರೈತರು ಹಾಗೂ ಸಂಶೋಧಕರಲ್ಲಿ ಬಹಳ ಜನಪ್ರಿಯತೆ ಗಳಿಸಿವೆ. ಕರ್ನಾಟಕದ ಅನೇಕ ಪ್ರದೇಶಗಳಿಂದ ದೇಸಿ ಕೋಳಿಗಳನ್ನು ತರಿಸಿ ಅಭಿವೃದ್ಧಿಪಡಿಸಲಾಗುತ್ತಿದೆ. ವಿಭಾಗವು ಗಿರಿರಾಜ, ಸ್ವರ್ಣಧಾರಾ ಹಾಗೂ ದೇಸಿ ತಳಿಯ ಒಂದು ದಿನದ ಕೋಳಿಮರಿಗನ್ನು ರೈತರು ಹಾಗೂ ಸರ್ಕಾರದ ಇಲಾಖೆಗಳಿಗೆ ಸರಬರಾಜು ಮಾಡುತ್ತಿದೆ. ವಿಭಾಗದಲ್ಲಿ ಪದವಿ, ಸ್ನಾತಕೋತ್ತರ ಹಾಗೂ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿದೆ. ಇಲ್ಲಿಯವರೆಗೆ ಈ ವಿಭಾಗದಲ್ಲಿ 193 ಸ್ನಾತಕೋತ್ತರ ಹಾಗೂ 40 ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗಿದೆ.