+91-8482-245241 regkvafsu@gmail.com

ಪಶುವೈದ್ಯಕೀಯ ಅಂಗರಚನಾ ವಿಜ್ಞಾನ ವಿಭಾಗ

ಪಶುವೈದ್ಯಕೀಯ ಅಂಗರಚನಾ ವಿಜ್ಞಾನ ವಿಭಾಗವನ್ನು 1958ರಲ್ಲಿ ಸ್ಥಾಪಿಸಲಾಯಿತು. ಸ್ನಾತಕ, ಸ್ನಾತಕೋತ್ತರ ಮತ್ತು ಪಿ.ಹೆಚ್.ಡಿ ಪದವಿಯ ಪಠ್ಯಕ್ರಮಗಳನ್ನು ಬೋಧಿಸುವುದರ ಜೊತೆಗೆ ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳು ನಡೆಯುತ್ತಿವೆ. ವಿಭಾಗದ ಮುಖ್ಯಸ್ಥರಾಗಿ ಡಾ. ಆರ್. ಡಿ. ನಂಜಯ್ಯ, ಡಾ. ತ್ರಿವಿಕ್ರಮ ರಾವ್, ಡಾ ಅಬ್ದುಲ್ ಸಲಾಂ, ಡಾ. ಚಂದ್ರಮೌಳಿ, ಡಾ. ಆರ್. ವಿ. ಪ್ರಸಾದ್ ಮತ್ತು ಡಾ. ಕೆ. ವಿ. ಜಮುನಾರವರು ಕಾರ್ಯನಿರ್ವಹಿಸಿದ್ದಾರೆ.

ಸ್ನಾತಕೋತ್ತರ ಪದವಿಯನ್ನು 1972ರಲ್ಲಿ ಮತ್ತು ಪಿಹೆಚ್‍ಡಿ ಪದವಿಯನ್ನು 2008ರಲ್ಲಿ ಪ್ರಾರಂಭಿಸಲಾಯಿತು. ಎಲೆಕ್ಟ್ರಾನಿಕ್ ಸೂಕ್ಷ್ಮದರ್ಶಕ ಅಧ್ಯಯನ ಮತ್ತು ಇಮ್ಮ್ಯುನೋಹಿಸ್ಟೊಕೆಮಿಸ್ಟ್ರಿ ಅಧ್ಯಯನಗಳನ್ನು ಸಂಶೋಧನೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ವನ್ಯಜೀವಿಗಳ ವಿಧಿವಿಜ್ಞಾನ ವರದಿಗಳನ್ನು ಪೆÇಲೀಸ್ ಹಾಗೂ ಅರಣ್ಯ ಇಲಾಖೆಯ ಕೋರಿಕೆಯಂತೆ ನೀಡಲಾಗುತ್ತಿದೆ. ಪ್ಲಾಸ್ಟಿನೇಶನ್ ವಿಧಾನದ ಅಭಿವೃದ್ದಿಯ ಮೂಲಕ ಪ್ರಾಣಿ ಅಂಗಾಂಗಗಳ ಸಂರಕ್ಷಣೆ ಮಾಡಿ ಅಂಗರಚನಾ ವಿಜ್ಞಾನವನ್ನು ಬೋಧಿಸಲಾಗುತ್ತಿದೆ. ವಿಭಾಗದಲ್ಲಿ ಹಲವಾರು ಪ್ರಾಯೋಜಿತ ಯೋಜನೆಗಳನ್ನು ಕೈಗೊಳ್ಳಲಾಗಿದ್ದು ಪ್ರಸ್ತುತ ವಿ.ಜಿ.ಎಸ್.ಟಿ ಪ್ರಾಯೋಜಿತ ಯೋಜನೆಯು ಪ್ರಗತಿಯಲ್ಲಿದೆ.