+91-8482-245241 regkvafsu@gmail.com

ಪಶುವೈದ್ಯಕೀಯ ಸಾರ್ವಜನಿಕ ಆರೋಗ್ಯ ಹಾಗೂ ಸಮುದಾಯ ರೋಗಗಳ ಅಧ್ಯಯನ ವಿಜ್ಞಾನ ವಿಭಾಗ

ಸ್ನಾತಕ ಹಾಗೂ ಸ್ನಾತಕೋತ್ತರ ಪಶುವೈದ್ಯಕೀಯ ಪದವಿಯ ಅಧ್ಯಯನಕ್ಕೆ ಬೇಕಾದ ಸೌಲಭ್ಯಗಳಿವೆ. ನಾಲ್ಕು ಸ್ನಾತಕ ಪ್ರಯೋಗಾಲಯ, 02 ಸ್ನಾತಕೋತ್ತರ ಪ್ರಯೋಗಾಲಯಗಳು ಹಾಗೂ ದತ್ತಾಂಶ ಸಂಸ್ಕರಣೆ ಪ್ರಯೋಗಾಲಯವಿರುತ್ತದೆ.

ವಿಭಾಗವು ಒಟ್ಟು ಐದು ಬಾಹ್ಯ ಅನುದಾನಿತ, ಸುಮಾರು ರೂ. 93 ಲಕ್ಷದಷ್ಟು, ಭಾರತ ಸರ್ಕಾರ ಹಾಗೂ ವಿಶ್ವಬ್ಯಾಂಕ್ ಅನುದಾನಿತ, ಸಂಶೋಧನಾ ಯೋಜನೆಗಳನ್ನು ಪೂರ್ಣಗೊಳಿದೆ. ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ವಿಶ್ವವಿದ್ಯಾಲಯದಿಂದ ಪ್ರಾಯೋಜಿಸಲ್ಪಟ್ಟ ಮೂರು ಸಂಶೋಧನಾ ಯೋಜನೆಗಳು ಚಾಲ್ತಿಯಲ್ಲಿರುತ್ತವೆ ಪ್ರಾಣಿಜನ್ಯ ಆಹಾರ ಸುರಕ್ಷತೆ, ಪ್ರಾಣಿಜನ್ಯ ಸಾಂಕ್ರಾಮಿಕ ರೋಗಗಳು ಹಾಗೂ ಜೀವಾಣು ಪ್ರತಿಬಂಧಕಗಳ ರೋಗನಿರೋಧಕ ಶಕ್ತಿಗಳ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿದೆ. 2015 ರಿಂದ ಇಲ್ಲಿಯವರೆಗೆ ನಾಲ್ವರು ಸ್ನಾತಕೋತ್ತರ ಹಾಗೂ ಒಬ್ಬರು ಪಿ.ಹೆಚ್.ಡಿ. ಪದವಿಯನ್ನು ಪಡೆದುಕೊಂಡಿರುತ್ತಾರೆ.