ಪ್ರಾಣಿ ತಳಿ ಅನುವಂಶೀಯತೆ ಮತ್ತು ತಳಿ ವಿಜ್ಞಾನ ವಿಭಾಗ
ಪ್ರಾಣಿ ತಳಿ ಅನುವಂಶೀಯತೆ ಮತ್ತು ತಳಿ ಶಾಸ್ತ್ರ ಕೋರ್ಸ್‍ಗಳನ್ನು ಸ್ನಾತಕ ಹಾಗೂ ಸ್ನಾತಕೋತ್ತರ ಮತ್ತು ಜೈವಿಕ ಅಂಕಿ ಅಂಶಗಳು ಮತ್ತು ಕಂಪ್ಯೂಟರ್ ಅಪ್ಲಿಕೇಶನ್‍ಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿದೆ. ಸಂಶೋಧನಾ ಪ್ರಯೋಗಾಲಯವು ಪಿಸಿಆರ್ ಯಂತ್ರ, ಜೆಲ್ ಎಲೆಕ್ಟ್ರೋಫೋರೆಸಿಸ್ ಯಂತ್ರ, ಇನ್ಕೂಬೇಟರ್ ಸೌಲಭ್ಯಗಳಿವೆ. ಮಲೆನಾಡು ಗಿಡ್ಡಾ ತಳಿ ಸಂಶೋಧÀನೆ ಹಾಗೂ ಮಾಹಿತಿ ಕೇಂದ್ರವನ್ನು ವಿಭಾಗವು ನಿರ್ವಹಿಸುತ್ತಿದೆ. ಕೇಂದ್ರದಲ್ಲಿ ಮಲೆನಾಡು ಗಿಡ್ಡಾ ತಳಿಯ ಉತ್ಪಾದನೆ ಸಾಮಥ್ರ್ಯ ಹಾಗೂ ಅದರ ವಿವಿಧ ಗುಣಾಂಶಗಳನ್ನು ದಾಖಲಿಸಲಾಗುತ್ತಿದೆ. ಇದಲ್ಲದೆ ರೈತರ ಅನುಕೂಲಕ್ಕಾಗಿ ಹಾಗೂ ಪ್ರದರ್ಶನ ಘಟಕವಾಗಿಯೂ ಕಾರ್ಯನಿವಹಿಸುತ್ತದೆ. ವಿಭಾಗದ ಅಧ್ಯಾಪಕರು ವಿವಿಧ ತರಬೇತಿ ಕಾರ್ಯಕ್ರಮಗಳಿಗೆ ಸಂಪನ್ಮೂಲಕರಾಗಿ ಸೇವೆ ಸಲ್ಲಿಸಿದ್ದಾರೆ. ಜಾನುವಾರು ಪ್ರದರ್ಶನಗಳಿಗೆ ತೀರ್ಪುಗಾರರಾಗಿ ಭಾಗವಹಿಸುವುದು ಮುಂತಾದ ವಿವಿಧ ವಿಸ್ತರಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ವಿಭಾಗದಲ್ಲಿ ಸಂದರ್ಶಕರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿವಿಧ ಜಾನುವಾರು ತಳಿಗಳ ಮಾಹಿತಿಗಳನ್ನು ಭಿತ್ತಿಚಿತ್ರಗಳ ಮುಖಾಂತರ ಪ್ರದರ್ಶಿಸಲಾಗಿದೆ. ಅಧ್ಯಾಪಕರು ಪ್ರಾಣಿ ತಳಿ ಶಾಸ್ತ್ರ ಮತ್ತು ಸಂತಾನೋತ್ಪತ್ತಿ ಕ್ಷೇತ್ರಗಳಲ್ಲಿ ನಿಯತಕಾಲಿಕ ಸಂಶೋಧನಾ ಲೇಖನಗಳನ್ನು ಮತ್ತು ಸಾಮಾನ್ಯ ಪತ್ರಿಕೆಗಳಲ್ಲಿ ಜನಪ್ರಿಯ ಲೇಖನಗಳನ್ನು ಪ್ರಕಟಿಸುತ್ತಾರೆ.