+91-8482-245241 regkvafsu@gmail.com

ಪ್ರಾಣಿ ಆಹಾರ ವಿಜ್ಞಾನ ವಿಭಾಗ

ವಿಭಾಗವು ಸ್ನಾತಕ ಪದವಿಯ ಪಠ್ಯಕ್ರಮಗಳನ್ನು 2006-07ರಿಂದ ಮತ್ತು ಸ್ನಾತಕೋತ್ತರ ಪದವಿಯ ಅಧ್ಯಯನವನ್ನು 2015-16 ರಿಂದ ಆರಂಭಿಸಿದೆ. ಅತ್ಯಾಧುನಿಕ ಪ್ರಯೋಗಶಾಲೆಗಳು ಹಾಗೂ ಉಪಕರಣಗಳಿವೆ.

ಜಾನುವಾರುಗಳ ಶಕ್ತಿ-ಸಸಾರಜನಕ ಪೌಷ್ಟಿಕತೆ, ಮಲೆನಾಡು ಗಿಡ್ಡ್ಡಾ ತಳಿಯ ಜಾನುವಾರುಗಳ ಪೌಷ್ಟಿಕತೆ, ಸಂಪ್ರದಾಯವಲ್ಲದ ಆಹಾರಮೂಲಗಳ ಪೌಷ್ಟಿಕತೆ, ಪಶು ಆಹಾರ ತಂತ್ರಜ್ಞಾನ ಮತ್ತು ಇನ್ನಿತರ ಸಂಶೋಧನೆಗಳು ಈ ವಿಭಾಗದಲ್ಲಿ ನಡೆದಿವೆ.

ವಿಭಾಗವು ಜಾನುವಾರು ಮತ್ತು ಕುಕ್ಕುಟ ಉತ್ಪಾದನೆ ಕ್ಷೇತ್ರದ ಭಾಗೀದಾರರ ನಡುವೆ ನೇರ ಸಂಬಂಧವನ್ನು ಇರಸಿಕೊಂಡಿದೆ. ಪಶುವೈದ್ಯರಿಗಾಗಿ ಪಶು ಪೋಷಣೆಯ ಬಗ್ಗೆ ತರಬೇತಿ, ಜಾನುವಾರು ಹಾಗೂ ಕುಕ್ಕುಟ ಆಧಾರಿತ ಉದ್ದಿಮೆದಾರರಿಗೆ ತರಬೇತಿ, ಜಾನುವಾರು ಹಾಗೂ ಕೋಳಿ ಸಾಕಾಣಿಕೆದಾರರಿಗೆ ತರಬೇತಿ ನೀಡಲಾಗುತ್ತಿದೆ. ಪ್ರಾತ್ಯಕ್ಷಿಕೆ ಮತ್ತು ಪಶು ಆಹಾರ ಪೌಷ್ಟಿಕಾಂಶ ವಿಶ್ಲೇಷಣಾ ಸೌಲಭ್ಯಗಳಿವೆ.