+91-8482-245241 regkvafsu@gmail.com

ಪಶುವೈದ್ಯಕೀಯ ಮತ್ತು ಪಶುಪಾಲನಾ ವಿಸ್ತರಣ ಶಿಕ್ಷಣ ವಿಭಾಗ

ಪಶುವೈದ್ಯಕೀಯ, ಪಶುಪಾಲನಾ ವಿಸ್ತರಣಾ ವಿಭಾಗವು ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣ ನೀಡುತ್ತಿದೆ. ವಿಭಾಗವು ಸುಸಜ್ಜಿತ ಶ್ರವಣ-ದೃಶ್ಯ ತಾಂತ್ರಿಕತೆ ಪ್ರಯೋಗಾಲಯ, ಗುಂಪು ಚರ್ಚಾ ಕೊಠಡಿ, ವಸ್ತು ಸಂಗ್ರಹಾಲಯ, ವಿಚಾರ ಸಂಕೀರ್ಣ ಕೊಠಡಿ, ಸ್ನಾತಕೋತ್ತರ ಪ್ರಯೋಗಾಲಯ ಮುಂತಾದವುಗಳನ್ನು ಹೊಂದಿರುತ್ತದೆ. ವಿಸ್ತರಣಾ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಪುಸ್ತಕಗಳು, ಪತ್ರಿಕೆಗಳು, ವೈಜ್ಞಾನಿಕ ಸಂಶೋಧನಾ ಬರಹಗಳು ಇತ್ಯಾದಿಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಹೊಂದಿರುತ್ತದೆ. ವಿಭಾಗವು ವಿಶ್ವ ಬ್ಯಾಂಕು ಪ್ರಾಯೋಜಿತ ಸುಜಲಾ- 3 ಯೋಜನೆಯಡಿಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ “ಜಾನುವಾರು ಆಧಾರಿತ ವಿಸ್ತರಣಾ ಚಟುವಟಿಕೆಗಳು” ಎಂಬ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಜೊತೆಗೆ ವಿಭಾಗವು ರೈತರ ಮತ್ತು ಮಧ್ಯಮ ಹಂತದ ವಿಸ್ತರಣಾ ಕಾರ್ಯಕರ್ತರ ಅನುಕೂಲಕ್ಕೋಸ್ಕರ ಅನೇಕ ತರಬೇತಿ ಕಾರ್ಯಕ್ರಮಗಳು, ಪ್ರಾತ್ಯಕ್ಷಿತೆಗಳು, ಜಾನುವಾರು ಆರೋಗ್ಯ ಶಿಬಿರಗಳು, ಕಾರ್ಯಾಗಾರಗಳು, ಜಾನುವಾರು- ಕುಕ್ಕುಟ ಪ್ರದರ್ಶನಗಳನ್ನು ಆಯೋಜಿಸುತ್ತಿರುವ ಜೊತೆಗೆ ಮುದ್ರಣ ಮತ್ತು ಇತರ ಸಮೂಹ ಮಾದ್ಯಮಗಳ ಮೂಲಕ ಜಾನುವಾರು ಸಾಕಾಣಿಕಾದಾರರಿಗೆ ಮಾಹಿತಿ ಒದಗಿಸುತ್ತಿದೆ.