ಪಶು ಶರೀರಕ್ರಿಯಾ ಮತ್ತು ಜೀವರಸಾಯನ ವಿಜ್ಞಾನ ವಿಭಾಗ
ಪಶುವೈದ್ಯಕೀಯ ಶರೀರಕ್ರಿಯಾ ವಿಜ್ಞಾನ ಮತ್ತು ಜೀವರಸಾಯನ ವಿಜ್ಞಾನ ವಿಭಾಗವು ಸ್ನಾತಕ ಪದವಿಯ ಬೋಧನೆಯಲ್ಲಿ ತೊಡಗಿಸಿಕೊಂಡಿದೆ. ಪಶುವೈದ್ಯಕೀಯ ಜೀವರಸಾಯನಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಕಾರ್ಯಕ್ರಮವಿದೆ. ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಎರಡು ಸುಸಜ್ಜಿತ ಪ್ರಯೋಗಾಲಯಗಳಿವೆ. ಕಾಲೇಜು ಚಿಕಿತ್ಸಾ ಸಂಕೀರ್ಣ ವಿಭಾಗಕ್ಕೆ ರೋಗನಿರ್ಣಯದ ಪ್ರಯೋಗಾಲಯ ಸೇವೆಗಳನ್ನು ಸಹ ಒದಗಿಸಲಾಗುತ್ತಿದೆ. ಶಾರೀರಿಕ, ಜೀವರಸಾಯನಿಕ ಮತ್ತು ಆಣ್ವಿಕ ಜೀವಶಾಸ್ತ್ರ ವಿಧಾನಗಳ ಕೌಶಲ್ಯಾಭಿವೃದ್ಧಿಯ ಕಡೆಗೆ ಈ ವಿಭಾಗವು ಹೆಚ್ಚು ಗಮನಹರಿಸುತ್ತಿದೆ.
©2019 copyright kvafsu.edu.in
Powered by : Premier Technologies