ಪಶುವೈದ್ಯಕೀಯ ಚಿಕಿತ್ಸಾ ಸಂಕಿರ್ಣ ವಿಭಾಗ
ಜಾನುವಾರು ಸಾಕಾಣಿಕಾ ಸಂಕೀರ್ಣ ವಿಭಾಗದಲ್ಲಿ ಹೈನು ಘಟಕ (ಮಿಶ್ರ ತಳಿ ಜರ್ಸಿ ಮತ್ತು ಹೆಚ್.ಎಫ್, ದೇವಣಿ, ಹಳ್ಳಿಕಾರ್ ಮತ್ತು ಗಿರ್ ರಾಸುಗಳು), ಎರೆ ಹುಳು ಗೊಬ್ಬರ ಘಟಕ (5 ಟನ್ ಸಾಮಥ್ರ್ಯ), ಕುರಿ ಮತ್ತು ಮೇಕೆ ಘಟಕ (ಡೆಕ್ಕನಿ, ಬನ್ನೂರು, ಮತ್ತು ಓಸ್ಮಾನಬಾದಿ), ಹಂದಿ ಸಾಕಾಣಿಕೆ ಘಟಕ (ಲಾರ್ಜ್ ವೈಟ್ ಯಾರ್ಕ್ ಶೈರ್), ಕುಕ್ಕುಟ ಘಟಕ (ಮೊಟ್ಟೆ ಘಟಕ: 1000 ಸಾಮಥ್ರ್ಯ, ಸ್ವಯಂಚಾಲಿತ ಬ್ರಾಯ್ಲರ್ ಘಟಕ: 500 ಸಾಮಥ್ರ್ಯ, ಮಾತೃ ಕೋಳಿ: 500 ಸಾಮಥ್ರ್ಯ, ದೇಸಿ ಕೋಳಿ), ಕೋಳಿ ಮರಿ ಉತ್ಪಾದನೆ ಘಟಕ (12,000 ಸಾಮಥ್ರ್ಯ), ಸಣ್ಣ ಪ್ರಾಣಿ ಘಟಕ (ಇಲಿಗಳು), ಪಶು ಆಹಾರ ತಯಾರಿಕಾ ಘಟಕ (2 ಟನ್), ಮೇವು ಉತ್ಪಾದನೆ ಘಟಕ (18 ಬಹು ವಾರ್ಷಿಕ ಮೇವಿನ ಬೆಳೆಗಳು, 10 ಮೇವಿನ ಮರಗಳು, 4 ವಾರ್ಷಿಕ ಮೇವಿನ ಬೆಳೆಗಳು), ರಸಮೇವು ತೊಟ್ಟಿಗಳು (10 ಟನ್ ಸಾಮಥ್ರ್ಯ), ಕೃಷಿ ಹೊಂಡ, ಮೇವಿನ ಬೆಳೆಗಳ ತಾಕು, ಮೇವಿನ ಬೆಳೆಗಳ ಪ್ರಾಯೋಗಿಕ ಕ್ಷೇತ್ರ (4 ಎಕರೆ), ಮೆಕ್ಕೆಜೋಳ ಉತ್ಪಾದನೆ (20 ಎಕರೆ). ಪ್ರಯೋಗ, ಸಂಶೋಧನೆ ಮತ್ತು ಸಂವರ್ಧನೆಗಾಗಿ CPCSEA ಅನುಮತಿ ಹೊಂದಿರುವ ದೊಡ್ಡ, ಸಣ್ಣ, ಪ್ರಾಯೋಗಿಕ ಪ್ರಾಣಿ ಮತ್ತು ಕೋಳಿ ಘಟಕಗಳು ಇವೆ. ಪಶುಪಾಲಕರಿಗೆ ಸಂಕರಣ ತಳಿ ಮತ್ತು ಮೇವಿನ ಬೇರಿನ ಕಡ್ಡಿಯನ್ನು ಪೂರೈಸುತ್ತಿದೆ. ಸಂಶೋಧನಾ ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.