ಪಶುವೈದ್ಯಕೀಯ ಚಿಕಿತ್ಸಾ ಸಂಕಿರ್ಣ ವಿಭಾಗ
ಪಶುವೈದ್ಯಕೀಯ ಚಿಕಿತ್ಸಾ ಸಂಕಿರ್ಣ ವಿಭಾಗವು ಸ್ನಾತಕ ಪದವಿಗೆ ಪಶುವೈದ್ಯಕೀಯ ಚಿಕಿತ್ಸಾ ವಿಧಾನಗಳನ್ನು ಪಶುವೈದ್ಯಕೀಯ ಚಿಕಿತ್ಸಾ ಶಾಸ್ತ್ರ ವಿಭಾಗ, ಶಸ್ತ್ರಚಿಕಿತ್ಸಾ ಮತ್ತು ಕ್ಷ-ಕಿರಣ ವಿಭಾಗ ಮತ್ತು ಪಶುವೈದ್ಯಕೀಯ ಸ್ತ್ರೀರೋಗ ಮತ್ತು ಪ್ರಸೂತಿಶಾಸ್ತ್ರ ಘಟಕಗಳಲ್ಲಿ ಬೋಧಿಸುತ್ತಿದೆ. ಜಾನುವಾರು ಮತ್ತು ಸಾಕು ಪ್ರಾಣಿಗಳ ರೋಗ ತಪಾಸಣೆ ಮತ್ತು ಚಿಕಿತ್ಸೆ, ರೋಗ ನಿರೋಧಕ ಚುಚ್ಚುಮದ್ದು, ಜಂತುನಾಶಕ ಔಷಧೋಪಚಾರಗಳ ಜೊತೆಗೆ ಶಸ್ತ್ರ ಚಿಕಿತ್ಸೆ, ಕೃತಕ ಗರ್ಭಧಾರಣೆ ಮತ್ತು ಪ್ರಸವ ತೊಂದರೆಗಳ ನಿವಾರಣೆ ಮಾಡಲಾಗುತ್ತಿದೆ. ಸಂಚಾರಿ ಪಶುವೈದ್ಯಕೀಯ ಸೇವೆ ಮತ್ತು ಪಶು ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಪರೀಕ್ಷೆ ತಪಾಸಣೆ ಉಪಕರಣಗಳಾದ ಇಸಿಜಿ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಕ್ಷ-ಕಿರಣ, ಕಿವಿ ಪರೀಕ್ಷೆ ಸಾಧನ ಮತ್ತು ಕಣ್ಣು ಪರೀಕ್ಷೆ ಸಾಧನಗಳನ್ನು ಹೊಂದಿರುತ್ತದೆ. ಕೇಂದ್ರ ಪ್ರಯೋಗಾಲಯದಲ್ಲಿ ರಕ್ತ, ಜೀವರಸಾಯನ, ರಕ್ತಸಾರ, ಸಗಣಿ ಮತ್ತು ಇತರೆ ಮಾದರಿಗಳನ್ನು ರೋಗನಿರ್ಣಯಕ್ಕಾಗಿ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತಿದೆ. ರೈತರ ಸೇವೆಗಾಗಿ ಈ ವಿಭಾಗವು ಮಾದರಿ ಪಶು ಆಸ್ಪತ್ರೆ ಹಾಗೂ ರೋಗನಿರ್ಣಯ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ.