ಪಶುವೈದ್ಯಕೀಯ ಚಿಕಿತ್ಸಾ ವಿಜ್ಞಾನ ವಿಭಾಗ
ಪಶುವೈದ್ಯಕೀಯ ಚಿಕಿತ್ಸಾ ವಿಜ್ಞಾನ ವಿಭಾಗವು ಸ್ನಾತಕ ಪದವಿಗೆ ಸಾಮಾನ್ಯ ಮತ್ತು ಅಂಗಾಂಗ ರೋಗಗಳು, ಬ್ಯಾಕ್ಟೀರಿಯ, ವೈರಸ್, ಫಂಗಸ್, ರಿಕೆಟ್ಸಿಯಾ, ಪರೋಪಜೀವಿ ರೋಗಗಳು, ಉತ್ಪಾದನೆಗೆ ಸಂಬಂಧಿಸಿದ ರೋಗಗಳು, ಖನಿಜಾಂಶ ಮತ್ತು ಜೀವಸತ್ವಗಳ ಕೊರತೆಯ ರೋಗಗಳು, ವನ್ಯಜೀವಿಗಳ ರೋಗಗಳು, ಪ್ರಾಣಿಗಳ ನ್ಯಾಯಶಾಸ್ತ್ರ, ನೀತಿಶಾಸ್ತ್ರ ಮತ್ತು ಪ್ರಾಣಿ ಕಲ್ಯಾಣದ ಬಗ್ಗೆ ಬೋಧಿಸುತ್ತಿದೆ. ಪಶು ಚಿಕಿತ್ಸಾ ಸಂಕೀರ್ಣದಲ್ಲಿ ಸಂಚಾರಿ ಪಶುವೈದ್ಯಕೀಯ ಸೇವೆ ಮತ್ತು ಪಶು ಆರೋಗ್ಯ ಶಿಬಿರಗಳಲ್ಲಿ ಜಾನುವಾರು ಮತ್ತು ಸಾಕು ಪ್ರಾಣಿಗಳ ರೋಗ ತಪಾಸಣೆ ಮತ್ತು ಚಿಕಿತ್ಸೆ, ರೋಗ ನಿರೋದಕ ಚುಚ್ಚುಮದ್ದು, ಜಂತುನಾಶಕ ಔಷಧೋಪಚಾರ, ಬಾಹ್ಯ ಪರೋಪಜೀವಿಗಳ ಹತೋಟಿಗಳನ್ನು ಕೈಗೊಳ್ಳುತ್ತಿದೆ. ದುಂಡು ಹುಳುಗಳ ಬಾಧೆÉ, ಸಿಸ್ಟೋಸೊಮಿಯಾಸಿಸ್ (ಮೂಗುಹುಣ್ಣು), ಅನಾಪ್ಲಾಸ್ಮೋಸಿಸ್, ಬ್ಯಾಕ್ಟೀರಿಯಾ ಮತ್ತು ಒಳ ಪರಾವಲಂಬಿ ಜೀವಿಗಳಿಂದ ಬರುವ ಅತಿಸಾರ ಭೇಧಿ ಮತ್ತು ನಾಯಿಗಳಲ್ಲಿ ಬರುವ ಡೈರೊಫೈಲೆರಿಯಾ ರೋಗದ ಕುರಿತ ಸಂಶೋಧನೆಯನ್ನು ನಡೆಸಲಾಗಿದೆ. ಪಶುಮೇಳ, ಶ್ವಾನ ಪ್ರದರ್ಶನ, ಆಕಾಶವಾಣಿ ಮತ್ತು ದೂರದರ್ಶನ ಕಾರ್ಯಕ್ರಮ ಮತ್ತು ರೈತರಿಗೆ ವiತ್ತು ಪಶು ವೈದ್ಯರಿಗೆ ತರಬೇತಿಗಳಲ್ಲಿ ವಿಭಾಗದ ಶಿಕ್ಷಕರು ಭಾಗವಹಿಸುತ್ತಿದ್ದಾರೆ.