ದೈಹಿಕ ಶಿಕ್ಷಣ ವಿಭಾಗ
ಮೊದಲನೇ ವರ್ಷದ ಪದವಿ ವಿದ್ಯಾರ್ಥಿಗಳಿಗೆ 0+1 ನಾನ್ ಕ್ರೆಡಿಟ್ ಕಡ್ಡಾಯ ವಿಷಯವಾಗಿ ದೈಹಿಕ ಶಿಕ್ಷಣವನ್ನು ಬೋಧಿಸಲಾಗುತ್ತದೆ. ಮೊದಲನೇ ವರ್ಷದ ಬಿ.ವಿ.ಎಸ್ಸಿ. ಹಾಗೂ ಎ.ಹೆಚ್. ವಿದ್ಯಾರ್ಥಿಗಳಿಗೆ ಪ್ರತಿ ವಾರ 2 ಗಂಟೆಗಳ ಕಾಲ ದೈಹಿಕ ಶಿಕ್ಷಣವನ್ನು ಪ್ರಾಯೋಗಿಕವಾಗಿ ಕಲಿಸಲಾಗುತ್ತಿದೆ.
ಹೊರಾಂಗಣ ಆಟಗಳ ಸೌಲಭ್ಯ:
ದೈಹಿಕ ಶಿಕ್ಷಣ ವಿಭಾಗವು ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರಾಯೋಗಿಕ ತರಗತಿ ಹಾಗೂ ಅಂತರ ಕಾಲೇಜು ಮತ್ತು ಅಂತರ ವಿಶ್ವವಿದ್ಯಾಲಯಗಳ ಕ್ರೀಡಾ ಅಭ್ಯಾಸದ ಉದ್ದೇಶಕ್ಕಾಗಿ ಎರಡು ವಾಲಿಬಾಲ್ ಹಾಗೂ ಎರಡು ಕಬಡ್ಡಿ ಅಂಕಣಗಳನ್ನು ಹೊಂದಿದೆ, ಪುರುಷ ಹಾಗೂ ಮಹಿಳೆಯರಿಗೆ ಒಂದು ಸಿಮೆಂಟ್ ತಳಹಾಸಿನ ಬ್ಯಾಸ್ಕೆಟ್ಬಾಲ್ ಅಂಕಣವಿದೆ. ಪುರುಷರಿಗಾಗಿ ಒಂದು ಖೋ-ಖೋ ಅಂಕಣ ಮತ್ತು ಕ್ರಿಕೆಟ್ ಹಾಗೂ ಫುಟ್ಬಾಲ್ ವಿವಿಧೋದ್ದೇಶ ಮೈದಾನಗಳಿವೆ.
ಒಳಾಂಗಣ ಆಟಗಳ ಸೌಲಭ್ಯ:
ಕಾಲೇಜಿನ ಮುಖ್ಯ ಕಟ್ಟಡದಲ್ಲಿ ಒಂದು ಒಳಾಂಗಣ ಸಭಾಂಗಣದಲ್ಲಿ ಕಬಡ್ಡಿ ಮ್ಯಾಟ್ ಒಳಾಂಗಣ ಅಂಕಣ, ಟೆಬಲ್ ಟೆನ್ನಿಸ್, ಕೇರಂ, ಚೆಸ್, ಜಿಮ್ನಾಷಿಯಂಗೆ ಸ್ಥಳ ಕಲ್ಪಿಸಲಾಗಿದೆ. ಡಾ. ಭರತಭೂಷಣ್, ಎಮ್ ಇವರು ಈ ವಿಭಾಗದ ಪ್ರಭಾರಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ