ಪಶುವೈದ್ಯಕೀಯ ಔಷಧ ವಿಜ್ಞಾನ ಮತ್ತು ವಿಷವಿಜ್ಞಾನ ವಿಭಾಗ
ತೃತೀಯ ವರ್ಷದ ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ಪಶುವೈದ್ಯಕೀಯ ಔಷಧ ವಿಜ್ಞಾನ ಮತ್ತು ವಿಷವಿಜ್ಞಾನ ವಿಷಯವನ್ನು ಬೋಧಿಸಲಾಗುತ್ತಿದೆ.
2015-16 ರಿಂದ ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಲಾಗಿದ್ದು ಈಗಾಗಲೇ ಆರು ವಿದ್ಯಾರ್ಥಿಗಳು ಪದವಿ ಪಡೆದಿರುತ್ತಾರೆ. ವಿಭಾಗವು ಸುಸಜ್ಜಿತವಾದ ಉತ್ತಮ ಗುಣಮಟ್ಟದ ಉಪಕರಣಗಳನ್ನು ಹೊಂದಿದೆ. ಪಶುವೈದ್ಯರಿಗೆ ಮತ್ತು ರೈತರಿಗೆ ವಿಭಾಗದಿಂದ ಸಲಹೆ ಮತ್ತು ತರಬೇತಿ ಕಾರ್ಯಕ್ರಮಗಳು ನೀಡಲಾಗುತ್ತಿದೆ. ಸಸ್ಯ ಜನ್ಯ ವಿಷ ಬಾಧೆ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ. ಸಣ್ಣ ಪ್ರಾಯೋಗಿಕ ಪ್ರಾಣಿಗಳ ಮೇಲೆ ಸಂಶೋಧನೆ ನಡೆಸುವ ಸೌಲಭ್ಯವಿದೆ.
ಕಾರ್ಯನಿರ್ವಹಿಸುತ್ತಿರುವ ಪಶುವೈದ್ಯರ ಸಹಾಯದಿಂದ ಸುಮಾರು 68 ಹಳ್ಳಿಗಳಲ್ಲಿ ವಿಶೇಷ ಶಿಬಿರಗಳನ್ನು ನಡೆಸಿ ಅನುತ್ಪಾದಕ ರಾಸುಗಳನ್ನು ಉತ್ಪಾದಕವಾಗಿ ಪರಿವರ್ತಿಸಲಾಗಿದೆ. ಕ್ಷೇತ್ರ ಮಟ್ಟದ ಪಶುವೈದ್ಯರಿಗೆ ಹೊಸ ಔಷಧಗಳ ಬಗ್ಗೆ ಮಾಹಿತಿ ನೀಡಿ ಅವುಗಳ ಬಳಕೆಯಲ್ಲಿ ಮಾರ್ಗದರ್ಶನ ನೀಡಲಾಗುತ್ತಿದೆ. ಗಿಡಮೂಲಿಕೆ ಔಷಧಿಗಳ ಬಗ್ಗೆ ರೈತರಿಗೆ ತಿಳುವಳಿಕೆ ನೀಡಲಾಗುತ್ತಿದೆ. ಗಿಡ ಮೂಲಿಕೆಗಳ ಔಷಧವನವನ್ನು ಸ್ಥಾಪಿಸಲಾಗಿದೆ. ಇದರಿಂದ ಪಶುವೈದ್ಯರು, ರೈತರು ಮತ್ತು ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ಪಾರಂಪರಿಕ ಚಿಕಿತ್ಸಾ ವಿಧಾನದ ಮಾಹಿತಿ ದೊರೆಯುತ್ತದೆ. ವಿವಿಧ ಸಸ್ಯಗಳ ಬೀಜ, ತೊಗಟೆ, ಎಲೆ ಇತ್ಯಾದಿಗಳನ್ನು ಸಂರಕ್ಷಿಸಿ ಇರಿಸಲಾಗಿದ್ದು ಅವುಗಳ ಉಪಯೋಗದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಪಶುಗಳಲ್ಲಿ ಜನನ ಸಂಬಂಧಿ ಕಾಯಿಲೆಗಳ ಬಗ್ಗೆ ಅನೇಕ ಕರಪತ್ರಗಳನ್ನು ಪ್ರಕಟಿಸಲಾಗಿದೆ.