ಪಶುವೈದ್ಯಕೀಯ ಅಂಗರಚನಾ ವಿಜ್ಞಾನ ವಿಭಾಗ
ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಿಗೆ ಅಗತ್ಯವಿರುವ ವಿವಿಧ ಅಂಗರಚನಾ ವಿಜ್ಞಾನದ ಮಾದರಿ ಮತ್ತು ಅಸ್ಥಿಪಂಜರಗಳ ಸಂಗ್ರಹಾಲಯವಿದೆ. ಹಿಸ್ಟಾಲಜಿ ಮತ್ತು ಭ್ರೂಣಶಾಸ್ತ್ರ ಪ್ರಯೋಗಾಲಯಗಳಿವೆ. ಸುಸಜ್ಜಿತ ಹಾಗೂ ಉನ್ನತ ಉಪಕರಣಗಳಾದ ಸ್ವಯಂಚಾಲಿತ ಮೈಕ್ರೋಟೋಮ್, ಟ್ರೈನಾಕ್ಯುಲರ್ ಮೈಕ್ರೋಸ್ಕೋಪ್, ಸ್ಟೀರಿಯೋಜೂಮ್ ಮೈಕ್ರೋಸ್ಕೋಪ್ ಗಳಿವೆ. ಬೋಧನೆಯ ಜೊತೆಗೆ ಸಂಶೋಧನಾ ಹಾಗೂ ವಿಸ್ತರಣಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗಿದೆ. ಕೆಲ ತಂತ್ರಜ್ಞಾನಗಳನ್ನು ಸ್ಟಾರ್ಟ-ಅಪ್ ಗಳಿಗೆ ವರ್ಗಾಯಿಸಲಾಗಿದೆ.
ಮುಕ್ತಾಯಗೊಂಡ ಸಂಶೋಧನಾ ಪ್ರಾಯೋಜನೆಗಳು
1. ಕಪಪಮೀವಿವಿಯಿಂದ ಅನುದಾನಿತ ಪ್ರಾಯೋಜನೆ ‘ಮುಧೋಳ ನಾಯಿಯ ಮೂಳೆಗಳ ಅಧ್ಯಯನ’.
2. ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ವಿಭಾಗದ ಅಂಗಸಂಸ್ಥೆಯಾದ ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ಅಸಿಸ್ಟೆನ್ಸ್ ಕೌನ್ಸಿಲ್ ಬಯೋಸ್ಕ್ಯಾ ಫೋಲ್ಡ್ ಅಭಿವೃದ್ಧಿ.
3. ಅಂಗಾಶ ಕಸಿಯ ಅನ್ವಯಿಕೆಗಳಿಗಾಗಿ ಸಸ್ಯಮೂಲ ಸ್ಕ್ಯಾ ಫೋಲ್ಡ್ ತಂತ್ರಜ್ಞಾನ ಅಭಿವೃದ್ಧಿ.