+91-8482-245241 regkvafsu@gmail.com

ಪ್ರಾಣಿ ತಳಿ ಅನುವಂಶೀಯತೆ ಮತ್ತು ತಳಿ ವಿಜ್ಞಾನ ವಿಭಾಗ

ಪ್ರಾಣಿ ತಳಿ ಅನುವಂಶಿಯತೆ ಮತ್ತು ತಳಿ ಸಂವರ್ಧನೆಯಲ್ಲಿ ಗುಣಮಟ್ಟದ ಶಿಕ್ಷಣ, ತಳಿ ಸಂರಕ್ಷಣೆ ಮತ್ತು ಆಣ್ವಿಕ ಅನುವಂಶಿಯತೆ ಕ್ಷೇತ್ರದಲ್ಲಿ ಮೂಲಭೂತ ಮತ್ತು ಅನ್ವಯಿಕ ಸಂಶೋಧನೆಗಳನ್ನು ಕೈಗೊಳ್ಳುವುದು ವಿಭಾಗದ ಪ್ರಮುಖ ಉದ್ದೇಶಗಳಾಗಿವೆ. ಕರ್ನಾಟಕದ ಈ ಭಾಗದ ಜಾನುವಾರುಗಳ ಸ್ಥಳೀಯ ತಳಿಗಳ ಸಮೀಕ್ಷೆ, ಮೌಲ್ಯಮಾಪನ ಮತ್ತು ಗುಣಲಕ್ಷಣಗಳು ಸಂಶೋಧನೆಯ ಕ್ಷೇತ್ರಗಳಾಗಿವೆ. ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಅನುಕೂಲವಾಗಲು ಮತ್ತು ಇನ್ನಿತರ ವಿಭಾಗಗಳ ಸಿಬ್ಬಂದಿಗೆ ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆಗಾಗಿ ಗಣಕಯಂತ್ರಗಳ ಪ್ರಯೋಗಾಲಯವಿದೆ. ಸಿಬ್ಬಂದಿಯು ವಿವಿಧ ತರಬೇತಿ ಕಾರ್ಯಕ್ರಮಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ, ಜಾನುವಾರು ಪ್ರದರ್ಶನಗಳಿಗೆ ತೀರ್ಪುಗಾರರಾಗಿ ಮತ್ತು ಇನ್ನಿತರ ವಿಸ್ತರಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.