+91-8482-245241 regkvafsu@gmail.com

ಪಶುವೈದ್ಯಕೀಯ ಶಸ್ತ್ರಚಿಕಿತ್ಸಾ ಮತ್ತು ಕ್ಷ-ಕಿರಣ ವಿಜ್ಞಾನ ವಿಭಾಗ

ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರಿನ ಪಶು ಶಸ್ತ್ರಚಿಕಿತ್ಸಾ ವಿಭಾಗವು 1984 ರಲ್ಲಿ ಪ್ರಾರಂಭವಾಯಿತು. 1992ನೇ ಇಸವಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಲಾಗಿದೆ. ಇಲ್ಲಿಯವರೆಗೆ 48 ಸ್ನಾತಕೋತ್ತರ ಮತ್ತು 5 ಡಾಕ್ಟ್ಟೊರೇಟ್ ಪದವಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ.
ದೊಡ್ಡ ಜಾನುವಾರಗಳ ಆರೋಗ್ಯ ಕಾಪಾಡುವಲ್ಲಿ ಶಸ್ತ್ರಚಿಕಿತ್ಸಾ ವಿಭಾಗವು ಸಂಶೋಧನೆ ಜೊತೆಗೆ ನವೀನ ತಂತ್ರಜ್ಞಾನಗಳನ್ನು ಅವಿಷ್ಕರಿಸುತ್ತಾ ಬಂದಿದೆ. ವಿಭಾಗದಲ್ಲಿ ಲಭ್ಯವಿರುವ ಸೌಲಭ್ಯಗಳೆಂದರೆ ದೊಡ್ಡಜಾನುವಾರಿನ ಮತ್ತು ಸಣ್ಣಜಾನುವಾರಿನ ಆಧುನಿಕ ಆಪರೇಶನ್ ಥಿಯೇಟರ್, ಅರವಳಿಕೆ ನೀಡುವ ಉಪಕರಣ, ಭೌತಚಿಕಿತ್ಸೆಯ ವಿಭಾಗ, ರೋಗ ನಿಧಾನಕ್ಕೆ ಸಹಾಯ ಮಾಡಿ ಅವುಗಳ ಚಿತ್ರಣವನ್ನು ಸೆರೆಹಿಡಿಯುವ ಉಪಕರಣಗಳಾದ ಕ್ಷ-ಕಿರಣ, ಅಲ್ಟ್ರಾ ಸೌಂಡ್, ಆಪ್ತಾಲ್ಮೊಸ್ಕೋಪ್, ಲ್ಯಾಪ್ರೊಸ್ಕೋಪ್ ಮತ್ತು ಎಂಡೊಸ್ಕೋಪ್.