+91-8482-245241 regkvafsu@gmail.com

ಪಶುವೈದ್ಯಕೀಯ ಮತ್ತು ಪಶುಪಾಲನ ವಿಸ್ತರಣ ಶಿಕ್ಷಣ ವಿಭಾಗ

ವಿಸ್ತರಣಾ ಶಿಕ್ಷಣದಲ್ಲಿ ತಾಂತ್ರಿಕ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡುವುದು. ಪಶುಸಂಗೋಪನಾ ವಿಸ್ತರಣಾ ಸಮಸ್ಯೆಗಳ ಬಗ್ಗೆ ಸಂಶೋಧನೆ ನಡೆಸುವುದು, ಪಶುಸಂಗೋಪನಾ ತಂತ್ರಜ್ಞಾನಗಳನ್ನು ವರ್ಗಾಯಿಸುವುದು ಮತ್ತು ಜಾನುವಾರು ಸಲಹಾ ಸೇವೆಗಳನ್ನು ಒದಗಿಸುವುದು ವಿಭಾಗದ ಮುಖ್ಯ ಉದ್ದೇಶಗಳಾಗಿವೆ. ವಿಭಾಗದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ.

ವಿಭಾಗವು ರೈತರನ್ನು ಸಮುದಾಯವಾಗಿ ಸಂಘಟಿಸುವ ಕ್ರಿಯಾ ಸಂಶೋಧನೆ (2000) ಬೀದರ ಜಿಲ್ಲೆಯಲ್ಲಿ ಎತ್ತಿನ ಬಳಕೆಯ ಸ್ಥಿತಿ (2001-03), ಸ್ಥಳೀಯ ಆಡುಗಳಿಗೆ ಪೂರಕವಾದ ಆಹಾರ ನೀಡುವುದು (2001-03), ಸ್ವಸಹಾಯ ಗುಂಪುಗಳಿಂದ ಜಾನುವಾರು ಉತ್ಪಾದನೆ ಹೆಚ್ಚಿಸುವುದು (2002-05), ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ (ಡಿಬಿಟಿ) ಪ್ರಾಯೋಜಿತ ಹೈದರಾಬಾದ್ ಕರ್ನಾಟಕ ಪ್ರದೇಶದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯುವಕರಲ್ಲಿ ಬಡತನ ನಿವಾರಣೆ ಮತ್ತು ಸುಸ್ಥಿರ ಅಭಿವೃದ್ಧಿ, ಬೀದರ ಜಿಲ್ಲೆಯಲ್ಲಿ ಸಂಪನ್ಮೂಲ ಮತ್ತು ಉದ್ಯಮಶೀಲತೆ ನಿರ್ವಹಣೆಯ ಮೂಲಕ ಜೀವನೋಪಾಯದ ಭದ್ರತೆ (2006-2011) ದಂತಹ ಸಂಶೋಧನಾ ಯೋಜನೆಗಳನ್ನು ಪೂರ್ಣಗೊಳಿಸಿದೆ. ವಿಭಾಗವು 2014 ರಿಂದ 2018 ರವರೆಗೆ ವಿಶ್ವಬ್ಯಾಂಕ್ ಅನುದಾನಿತ ಸುಜಲಾ-3 ಯೋಜನೆಯನ್ನು ಕೂಡ ಅನುಷ್ಠಾನಗೊಳಿಸಿದೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್ತು, ಕರ್ನಾಟಕ ಪಶುವೈದ್ಯಕೀಯ ಪರಿಷತ್ತು, ಇನ್ನಿತರ ಇಲಾಖೆ ಮತ್ತು ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ರೈತರ ಮತ್ತು ಅಧಿಕಾರಿಗಳ ತರಬೇತಿ ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಸುತ್ತಿದೆ. ಮಾಧ್ಯಮ ಸಂವಹನ, ಜಾನುವಾರು ಪ್ರದರ್ಶನಗಳ ಆಯೋಜನೆ, ಜನಪ್ರಿಯ ಲೇಖನಗಳು, ಮತ್ತು ಕರಪತ್ರಗಳ ರೂಪದಲ್ಲಿ ತಾಂತ್ರಿಕ ಮಾಹಿತಿಯ ಪ್ರಕಟಣೆ, ಸ್ವಸಹಾಯ ಗುಂಪುಗಳ ರಚನೆ, ತಾಂತ್ರಿಕ ಸಲಹಾ ಸೇವೆಗಳು, ಅತಿಥಿ ಉಪನ್ಯಾಸಗಳು ಇತ್ಯಾದಿಗಳನ್ನು ಈ ವಿಭಾಗವು ನಡೆಸುತ್ತ್ತಿದೆ.