+91-8482-245241 regkvafsu@gmail.com

ಪಶುವೈದ್ಯಕೀಯ ಪರೋಪಜೀವಿ ವಿಜ್ಞಾನ ವಿಭಾಗ

ಪಶುವೈದ್ಯಕೀಯ ಪರೋಪಜೀವಿ ವಿಜ್ಞಾನ ವಿಭಾಗವು 1984ರಿಂದ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ನಡೆಸುತ್ತಿದೆ. ವಿಭಾಗವು ಪ್ರಾಣಿಗಳು ಮತ್ತು ಪಕ್ಷಿಗಳಲ್ಲಿ ಕಂಡುಬರುವ ಪರಾವಲಂಬಿ ರೋಗಗಳ ರೋಗನಿರ್ಣಯ ಕಾರ್ಯವನ್ನು ಮಾಡುವುದರ ಜೊತೆಗೆ ಕ್ಲಿಷ್ಟಕರ ಜಂತುಗಳ ಗುರುತು ಪತ್ತೆಹಚ್ಚುವ ಕಾರ್ಯನಿರ್ವಹಿಸುತ್ತ್ತಿದೆ. ಬೋಧನಾ ಚಿಕಿತ್ಸಾ ಸಂಕೀರ್ಣ, ಜಾನುವಾರು ಸಂಕೀರ್ಣ, ರೋಗಶಾಸ್ತ್ರ ವಿಭಾಗ ಮತ್ತು ಪಶುಸಂಗೋಪನಾ ಇಲಾಖೆಯಿಂದ ಪಡೆದ ಮಲ, ರಕ್ತ, ಚರ್ಮದ ಸ್ಕ್ರೇಪಿಂಗ್ ಗಳು, ಪರಾವಲಂಬಿ ಜೀವಿಗಳು ಮತ್ತು ಇತರೆ ಕ್ಲಿನಿಕಲ್ ಮಾದರಿಗಳನ್ನು ಪರೀಕ್ಷಿಸಿ ಫಲಿತಾಂಶ ನೀಡುತ್ತಿದೆ. ರಾಜ್ಯ ಸರ್ಕಾರದ ಪಶುಸಂಗೋಪನಾ ಇಲಾಖೆಯ ಪಶುವೈದ್ಯರಿಗೆ ಕ್ಲಿನಿಕಲ್ ಮಾದರಿ ಪರೀಕ್ಷೆಯ ತರಬೇತಿಯನ್ನು ನೀಡಲಾಗುತ್ತಿದೆ. ರೇಡಿಯೋ ಸಂದರ್ಶನ, ಕರಪತ್ರಗಳು ಮತ್ತು ವಿಸ್ತರಣಾ ಲೇಖನಗಳ ಮೂಲಕ ರೈತರಲ್ಲಿ ಪರಾವಲಂಬಿ ರೋಗಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.