ಸಂಶೋಧನೆ:
ಪ್ರಸಕ್ತ ಸಾಲಿನಲ್ಲಿ ಚಾಲ್ತಿಯಲ್ಲಿರುವ ಸಂಶೋಧನಾ ಯೋಜನೆಗಳು
1. ಕರ್ನಾಟಕ ಸರ್ಕಾರದ ಪ್ರಾಯೋಜನೆಯ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ (ಆರ್‍ಕೆವಿವೈ) “ಮಾದರಿ ದೇವಣಿ ತಳಿ ಜಾನುವಾರುಗಳ ಘಟಕ (ಫಾರ್ಮ) ಸ್ಥಾಪನೆ”
2. ಭಾರತೀಯ ಕೃಷಿ ಅನುಸಂಧಾನ ಪರಿಷತ್ತು, ನವದೆಹಲಿ ಪ್ರಾಯೋಜನೆಯ ಪರಿಶಿಷ್ಟ ಜಾತಿ ಉಪಯೋಜನೆ ಅಡಿಯಲ್ಲಿ “ಸಮಗ್ರ ಜಾನುವಾರು ಅಭಿವೃದ್ಧಿ ಮತ್ತು ಸಾಮಥ್ರ್ಯ ವೃದ್ಧಿ ಚಟುವಟಿಕೆಗಳ ಮೂಲಕ ಬೀದರ ಜಿಲ್ಲೆಯ ಪರಿಶಿಷ್ಟ ಜಾತಿ ಸಮುದಾಯದ ಜೀವನಾಧಾರ ಸುಧಾರಣೆ”
ಪೂರ್ಣಗೊಂಡಿರುವ ಸಂಶೋಧನಾ ಯೋಜನೆಗಳು
1. ಕರ್ನಾಟಕ ಜಾನುವಾರು ಅಭಿವೃದ್ಧಿ ಸಂಸ್ಥೆ, ಬೆಂಗಳೂರು ಪ್ರಾಯೋಜಿಸಿದ “ಬೀದರ ಜಿಲ್ಲೆಯಲ್ಲಿ ದೇವಣಿ ಜಾನುವಾರುಗಳ ಕಾರ್ಯಕ್ಷಮತೆಯನ್ನು ದಾಖಲಾತಿ” ಯೋಜನೆ.
2. ಸಿಬ್ಬಂದಿ ಸಂಶೋಧನಾ ಯೋಜನೆ ಅಡಿಯಲ್ಲಿ “ತೀವ್ರ ಪರಿಸ್ಥಿತಿಗಳಲ್ಲಿ ದೇವಣಿ ಹಸುಗಳ ಉತ್ಪಾದಕತೆ ಮತ್ತು ಸಂತಾನೋತ್ಪತ್ತಿ ಕಾರ್ಯಕ್ಷಮತೆ” ಕುರಿತು ಅಧ್ಯಯನವನ್ನು ಕೈಗೊಳ್ಳಲಾಗಿದೆ.
3. ರಾಷ್ಟ್ರಿಯ ಪ್ರಾಣಿಗಳ ಜೈವಿಕ ತಂತ್ರಜ್ಞಾನಗಳ ಸಂಸ್ಥೆ ಇವರ ಸಹಯೋಗದೊಂದಿಗೆ “ಹೈನುಗಾರಿಕೆ ಜಾನುವಾರುಗಳಲ್ಲಿ ಬರುವ ಥೈಲೆರಿಯಾಸಿಸ್ ರೋಗದ” ಕುರಿತು ಅಧ್ಯಯನ ಕೈಗೊಳ್ಳಲಾಗಿದೆ.
4. ಪಶುವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು ಇದರ ಸಹಯೋಗದೊಂದಿಗೆ “ಎಚ್.ಎಫ್ ಮತ್ತು ದೇವಣಿ ಹಸುಗಳ ಬಿಎಲ್‍ಟಿಎಪ್, ಟಿಸಿಆರ್4, ಮತ್ತು ಸಿಡಿ14 ಜೀನಗಳ ಅನುವಂಶಿಕ ಪಾಲಿಮಾರರ್ಫಿಸಂ ಮತ್ತು ಕೆಚ್ಚಲು ಬೇನೆ” ಕುರಿತು ಅಧ್ಯಯನವನ್ನು ಕೈಗೊಳ್ಳಲಾಗಿದೆ.
5. ಕೇಂದ್ರದಲ್ಲಿ ಪೂರ್ಣಗೊಂಡಿರುವ ಸಂಶೋಧನಾ ಯೋಜನೆಗಳು ಪಶುವೈದ್ಯಕೀಯ ಕಾಲೇಜು, ಬೀದರ ಇವರ ಸಹಯೋಗದೊಂದಿಗೆ ಪರಿವರ್ತನೆಯ ಅವಧಿಯಲ್ಲಿ “ದೇವಣಿ ಹಸುಗಳ ಚಯಾಪಚಯ ಕ್ರಿಯೆ” ಕುರಿತು ಅಧ್ಯಯನವನ್ನು ಕೈಗೊಳ್ಳಲಾಗಿದೆ.
ಕೇಂದ್ರದ ಗಮನಾರ್ಹ ಕೊಡುಗೆ
• ಕರ್ನಾಟಕ ಹಾಗೂ ಮಹಾರಾಷ್ಟ್ರ ಸರಕಾರದ ಕೃತಕ ಗರ್ಭಧಾರಣೆಯ ಕಾರ್ಯಕ್ರಮದಲ್ಲಿ ಸೇರ್ಪಡೆಗೊಳ್ಳಲು ಈ ಸಂಶೋಧನಾ ಕೇಂದ್ರದವತಿಯಿಂದ 05 ದೇವಣಿ ಹೋರಿಗಳನ್ನು ಪಶುವೈದ್ಯಕೀಯ ಇಲಾಖೆಗೆ ನೀಡಲಾಗಿದೆ.
ಪ್ರಶಸ್ತಿಗಳು:
• 13 ಡಿಸೆಂಬರ 2015 ರಂದು ಕೃಷಿ ವಿಜ್ಞಾನ ಕೇಂದ್ರ, ಬೀದರನಲ್ಲಿ ನಡೆದ ಕೃಷಿ ಮೇಳದಲ್ಲಿ “ಹಸುಗಳ ಪ್ರದರ್ಶನ” ಸ್ಪರ್ಧೆಯಲ್ಲಿ ಈ ಕೇಂದ್ರವು ಪ್ರಥಮ ಬಹುಮಾನವನ್ನು ಪಡೆದಿದೆ.