ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸುಸ್ವಾಗತ
ಪಶುಪಾಲನೆ, ಹೈನುಗಾರಿಕೆ ಮತ್ತು ಮೀನು ಸಾಕಾಣಿಕೆಯಂತಹ ರೈತೋದ್ಯಮಗಳ ಪ್ರಧಾನ ಅಭಿವೃದ್ಧಿಗಾಗಿ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಫೆಬ್ರವರಿ 23, 2004ರಲ್ಲಿ ಪ್ರಕಟಗೊಂಡ ಕರ್ನಾಟಕ ಕಾಯ್ದೆ ಸಂಖ್ಯೆ 9, 2004 ರಂತೆ ಸ್ಥಾಪಿಸಲಾಗಿದೆ. ವಿಶ್ವವಿದ್ಯಾಲಯವು ಏಪ್ರಿಲ್ 1, 2005ರಿಂದ ಕಾರ್ಯಾರಂಭ ಮಾಡಿದೆ. ಕರ್ನಾಟಕದಲ್ಲಿನ ಪಶುವೈದ್ಯಕೀಯ, ಪಶುವಿಜ್ಞಾನ, ಹೈನುಗಾರಿಕೆ ಮತ್ತು ಮತ್ಸ್ಯ ವಿಜ್ಞಾನಗಳಲ್ಲಿನ ಶಿಕ್ಷಣ, ಕಲಿಕೆ, ಸಂಶೋಧನೆ ಮತ್ತು ವಿಸ್ತರಣಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿಯ ಧ್ಯೇಯವನ್ನೊಳಗೊಂಡ ತಂತ್ರಜ್ಞಾನಗಳನ್ನು ಹಳ್ಳಿಗಳಿಗೆ ವರ್ಗಾಯಿಸುವ ಜವಾಬ್ದಾರಿಯೊಂದಿಗೆ ಸ್ಥಾಪಿಸಲಾಗಿದೆ.
ರೈತಾಪಿ ಜನರ ಅಭ್ಯುದಯವೇ ವಿಶ್ವವಿದ್ಯಾಲಯದ ಮುಖ್ಯ ಉದ್ದೇಶವೆಂಬುದನ್ನು ಸಾರಿ ಹೇಳುವ ‘ಗ್ರಾಮ್ಯಮುಖಿ – ರೈತಸ್ನೇಹಿ’ ಎಂಬ ಧ್ಯೇಯವಾಕ್ಯವನ್ನು ವಿಶ್ವವಿದ್ಯಾಲಯವು ಹೊಂದಿದೆ. ಪ್ರೊ.. ಆರ್. ಎನ್. ಶ್ರೀನಿವಾಸಗೌಡರವರನ್ನು ಮೊಟ್ಟಮೊದಲ ಕುಲಪತಿಗಳಾಗಿ ನೇಮಿಸಲಾಯಿತು. ಇವರು ಸೆಪ್ಟಂಬರ್ 2004ರಿಂದ 9 ಫೆಬ್ರವರಿ 2008ರವರೆಗೆ ಕಾರ್ಯ ನಿರ್ವಹಿಸಿದರು.
ಕುಲಪತಿಗಳ ಸಂದೇಶ
ಬೋಧನೆ, ಸಂಶೋಧನೆ ಮತ್ತು ವಿಸ್ತರಣೆ ಎಂಬ ಮೂರು ಪ್ರಮುಖ ಕ್ಷೇತ್ರಗಳಲ್ಲಿ ವಿಶ್ವವಿದ್ಯಾಲಯವು ಉತ್ತಮವಾಗಿ ಪ್ರಗತಿ ಸಾಧಿಸುತ್ತಿದೆ ಎಂಬುದು ನನಗೆ ಅತೀವ ಸಂತಸದ ಸಂಗತಿಯಾಗಿದೆ. ರೈತರೇ ಮೊದಲ ಆದ್ಯತೆ ಎಂಬ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಸೂಚನೆಯಂತೆ, ಪಶುಸಂಗೋಪನೆಗೆ ಸಂಬಂಧಿಸಿದ ತಂತ್ರಜ್ಞಾನಗಳೊಂದಿಗೆ ರೈತನನ್ನು ಸಬಲೀಕರಣಗೊಳಿಸಲು ವಿಶ್ವವಿದ್ಯಾಲಯವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ವಿಶ್ವವಿದ್ಯಾಲಯವು ಸುಮಾರು 31 ರೈತ ಸಾಹಿತ್ಯ ಪುಸ್ತಕಗಳನ್ನು ಕನ್ನಡ ಭಾಷೆಯಲ್ಲಿ ಪ್ರಕಟಿಸಿದೆ.
ಅಧೀನ ಕಾಲೇಜುಗಳು
ಮಹಿಳಾ ಕೋಶ
ವಿದ್ಯಾರ್ಥಿಗಳ ಕಾರ್ನರ್
ಕೌಶಲ್ಯ ಅಭಿವೃದ್ಧಿ ಕಾರ್ಯಗಳು
ಹಳೆಯ ವಿದ್ಯಾರ್ಥಿಗಳ ಕೋಶ
ಪ್ರಕಟಣೆಗಳು
-
ಸುದ್ದಿ
KVAFSU ಅನ್ನು KSURF ನಿಂದ ಪಂಚತಾರಾ ಸಂಸ್ಥೆಯಾಗಿ ರೇಟ್ ಮಾಡಲಾಗಿದೆ
-
ಕಾರ್ಯಕ್ರಮಗಳು
ಪಶು ಸಂಗೋಪನೆಯ ಮೂಲಕ ಸುಸ್ಥಿರ ಜೀವನೋಪಾಯಕ್ಕಾಗಿ ನವೀನ ವಿಧಾನಗಳು