+91-8482-245241 regkvafsu@gmail.com

ಸೌಲಭ್ಯಗಳು

ಗ್ರಂಥಾಲಯ

ಗ್ರಂಥಾಲಯವು ದೇಶದ ಮೀನುಗಾರಿಕೆ ಕ್ಷೇತ್ರದಲ್ಲಿ ಅತ್ಯುತ್ತಮ ಗ್ರಂಥಾಲಯಗಳಲ್ಲಿ ಒಂದಾಗಿರುವುದರಿಂದ ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು, ಇತರ ಸಂಸ್ಥೆಗಳ ಅಧ್ಯಾಪಕರು ಗ್ರಂಥಾಲಯಕ್ಕೆ ಭೇಟಿ ನೀಡುತ್ತಾರೆ. ಗ್ರಂಥಾಲಯವು ಸಾಮಾನ್ಯ ಮತ್ತು ತಾಂತ್ರಿಕ ವಿಷಯಗಳಲ್ಲಿ ಬಳಕೆದಾರರ ಅಗತ್ಯಗಳನ್ನು ಪೂರೈಸುತ್ತದೆ. ಪುಸ್ತಕಗಳು, ನಿಯತಕಾಲಿಕಗಳು ಮತ್ತು ಹಳೆಯ ಸಂಪುಟಗಳ ಹೊರತಾಗಿ, ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನಿಯತಕಾಲಿಕೆಗಳು ಮತ್ತು ಪತ್ರಿಕೆಗಳ ಸಂಗ್ರಹವಿದೆ. ಓದುವುದರ ಜೊತೆಗೆ, ಗ್ರಂಥಾಲಯದ ಸದಸ್ಯರು ಗ್ರಂಥಾಲಯದಿಂದ ಪುಸ್ತಕಗಳನ್ನು ಪಡೆಯಲು ಸಹ ಅರ್ಹರಾಗಿರುತ್ತಾರೆ. ವಿದ್ಯಾರ್ಥಿಗಳಿಗೆ ಸ್ಟಾಕ್ ವಿಭಾಗದಿಂದ 15 ದಿನಗಳ ಅವಧಿಗೆ ಮತ್ತು ಸಿಬ್ಬಂದಿಗಳಿಗೆ 30 ದಿನಗಳ ಅವಧಿಗೆ ಪುಸ್ತಕಗಳನ್ನು ಪಡೆಯಬಹುದು. ರೆಫರೆನ್ಸ್ ವಿಭಾಗದ ಪುಸ್ತಕಗಳನ್ನು ಗ್ರಂಥಾಲಯದ ಕೆಲಸದ ಅವಧಿಯಲ್ಲಿ ಅಧ್ಯಯನ ಮಾಡಬಹುದಾಗಿರುತ್ತದೆ. ಆದರೆ ವಿಶ್ವಕೋಶಗಳು, ವಾರ್ಷಿಕ ಪುಸ್ತಕಗಳು, ನಿಘಂಟುಗಳು ಮುಂತಾದ ಕಟ್ಟುನಿಟ್ಟಾದ ಉಲ್ಲೇಖ ಪುಸ್ತಕಗಳನ್ನು ಹೊರಗೆ ನೀಡಲಾಗುವುದಿಲ್ಲ. ಆದರೆ ಗ್ರಂಥಾಲಯದಲ್ಲಿ ಇವುಗಳ ಉಪಯೋಗವನ್ನು ಪಡೆದುಕೊಳ್ಳಬಹುದು. ಎರಡು ಪಠ್ಯ ಪುಸ್ತಕ ಬ್ಯಾಂಕ್‍ಗಳಿವೆ : 1) ಸಾಮಾನ್ಯ ಮತ್ತು 2) ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ. ಪಠ್ಯ ಪುಸ್ತಕ ಬ್ಯಾಂಕ್‍ಗಳಿಂದ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಒಂದು ಸೆಮಿಸ್ಟರ್ ಅವಧಿಗೆ ನೀಡಲಾಗುತ್ತದೆ. ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಕ್ಯಾಂಟೀನ್
ಮೀನುಗಾರಿಕಾ ಮಹಾವಿದ್ಯಾಲಯದ ಆವರಣದಲ್ಲಿ ಉತ್ತಮ ಕ್ಯಾಂಟೀನ್‍ನ ವ್ಯವಸ್ಥೆ ಇದೆ. ಇದು ಎಲ್ಲರಿಗೂ ಮುಕ್ತವಾಗಿದ್ದು, ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಇದೆ. ಎಲ್ಲಾ ರೀತಿಯ ತಿಂಡಿ, ತಂಪು ಪಾನೀಯ, ಊಟ ರಿಯಾಯಿತಿ ದರದಲ್ಲಿ ದೊರೆಯುತ್ತದೆ.

ಕ್ಯಾಂಟೀನ್ ಕೆಲಸದ ದಿನಗಳಲ್ಲಿ ಬೆಳಿಗ್ಗೆ 8.00ರಿಂದ ಸಂಜೆ 6.00ರ ವರೆಗೆ ತೆರೆದಿರುತ್ತದೆ.

ವಿದ್ಯಾರ್ಥಿ ನಿಲಯ
ಕಾಲೇಜಿನ ವಿದ್ಯಾರ್ಥಿಗಳ ವಸತಿ ಅಗತ್ಯತೆಗಳಿಗೆ ಪ್ರಮುಖ ಸ್ಥಾನ ನೀಡಲಾಗುತ್ತದೆ. ಕಾಲೇಜು ಪ್ರತಿ ಕ್ಯಾಂಪಸ್‍ಗಳಲ್ಲಿ ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿದ್ಯಾರ್ಥಿ ನಿಲಯಗಳನ್ನು ಹೊಂದಿದೆ. ಇದಲ್ಲದೆ, ಮುಖ್ಯ ಕ್ಯಾಂಪಸ್‍ನಲ್ಲಿರುವ ವಸತಿ ನಿಲಯಗಳನ್ನು ಸ್ನಾತಕ ವಿದ್ಯಾರ್ಥಿಗಳ ವಸತಿನಿಲಯ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ವಸತಿ ನಿಲಯವಾಗಿ ವಿಂಗಡಿಸಲಾಗಿದೆ. ಮಹಿಳಾ ಮತ್ತು ಹುಡುಗರ ವಸತಿ ನಿಲಯಗಳೆರಡೂ ಕ್ಷೇಮಪಾಲಕರ ನೇತೃತ್ವದಲ್ಲಿವೆ.

ವಸತಿ ನಿಲಯಗಳ ಕೊಠಡಿಗಳು ವಿಶಾಲವಾಗಿದ್ದು ಸುಸಜ್ಜಿತವಾಗಿವೆ. ಹಾಗೂ ಮನೆಯ ವಾತಾವರಣವನ್ನು ನೀಡುತ್ತವೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವಾರು ವಸತಿ ನಿಲಯದ ಆಯ್ಕೆಗಳಿವೆ. ಈ ರೀತಿಯ ವಸತಿ ಸೌಕರ್ಯಗಳಲ್ಲಿ, ವಿದ್ಯಾರ್ಥಿಗಳಿಗೆ ಟಿವಿ ಕೊಠಡಿ, ಬಿಸಿ, ತಂಪು ಮತ್ತು ಸಾಮಾನ್ಯ ಕುಡಿಯುವ ನೀರಿಗಾಗಿ ಆಕ್ವಾಗಾರ್ಡ್ ವ್ಯವಸ್ಥೆಯಿದೆ. ವಿದ್ಯಾರ್ಥಿ ನಿಲಯದ ಆವರಣದೊಳಗೆ ಇತರ ವಿರಾಮ/ ಕ್ರೀಡಾ ಚಟುವಟಿಕೆಗಳಿಗೆ ಪ್ರವೇಶವನ್ನು ಹೊಂದಿರುತ್ತಾರೆ.

ವಿದ್ಯಾರ್ಥಿ ವಸತಿ ನಿಲಯಗಳು ಈ ಕೆಳಗಿನ ಸೌಲಭ್ಯಗಳನ್ನು ಸಹ ಒಳಗೊಂಡಿದೆ:
• ಎಲ್ಲಾ ವಸತಿ ನಿಲಯಗಳಲ್ಲಿ ವೈ-ಪೈ ಸಂಪರ್ಕವನ್ನು ಒದಗಿಸಲಾಗಿದೆ
• ಎಲ್ಲಾ ವಸತಿ ನಿಲಯಗಳ ಪ್ರವೇಶ ದ್ವಾರಗಳಲ್ಲಿ ಮತ್ತು ಕ್ಯಾಂಪಸ್‍ನ ಒಳಗಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
• ಎಲ್ಲಾ ವಸತಿ ನಿಲಯಗಳಲ್ಲಿ 24 ಘಿ 7 ವಿದ್ಯುತ್ ಮತ್ತು ನೀರು ಸರಬರಾಜು ಸೌಲಭ್ಯಗಳಿವೆದೆ
• ಸಸ್ಯಾಹಾರ ಮತ್ತು ಮಾಂಸಾಹಾರ ಊಟದ ವ್ಯವಸ್ಥೆ
• ಎಲ್ಲಾ ವಸತಿ ನಿಲಯಗಳಲ್ಲಿ ಹಗಲು ಮತ್ತು ರಾತ್ರಿ ಸಮಯದಲ್ಲಿ ಕೇರ್‍ಟೇಕರ್‍ಗಳು ಮತ್ತು ಹೌಸ್ ಕೀಪಿಂಗ್ ಸೇವೆಗಳನ್ನು ಒದಗಿಸಲಾಗಿದೆ

ದೈಹಿಕ ಶಿಕ್ಷಣ

ದೈಹಿಕ ಶಿಕ್ಷಣ ವಿಭಾಗವು ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳು ಮತ್ತು ಆಟಗಳ ಸೌಲಭ್ಯಗಳೊಂದಿಗೆ ಸುಸಜ್ಜಿತವಾಗಿದೆ. ಇದು ವಿದ್ಯಾರ್ಥಿಗಳನ್ನು ಕ್ರೀಡೆ ಮತ್ತು ಮನರಂಜನಾ ದೈಹಿಕ ಚಟುವಟಿಕೆಗಳಲ್ಲಿ ನಿಯಮಿತವಾಗಿ ಭಾಗವಹಿಸುವಂತೆ ಮಾಡುವ ಮೂಲಕ ಅವರನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿರಿಸುತ್ತದೆ. ಅಥ್ಲೆಟಿಕ್ಸ್ ಮತ್ತು ಕ್ರೀಡಾ ವ್ಯಕ್ತಿಗಳನ್ನು ಅಂತರ ತರಗತಿ, ಅಂತರ ಮಹಾವಿದ್ಯಾಲಯ, ಅಂತರ ವಿಶ್ವವಿದ್ಯಾಲಯ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಿದ್ಧಪಡಿಸಲಾಗುತ್ತಿದೆ. ವಿಭಾಗದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಅಂತರಕಾಲೇಜು ಪಂದ್ಯಾವಳಿಗಳಲ್ಲಿ ಕ್ರೀಡೆ ಮತ್ತು ಆಟಗಳಲ್ಲಿ ಸಮಗ್ರ ಚಾಂಪಿಯನ್‍ಗಳನ್ನು ಗಳಿಸಿದ್ದಾರೆ ಮತ್ತು ಅಂತರ ವಿಶ್ವವಿದ್ಯಾಲಯದ ಪಂದ್ಯಾವಳಿಗಳಲ್ಲಿ ಬಹುಮಾನಗಳನ್ನು ಗೆದ್ದಿದ್ದಾರೆ.

ದೈಹಿಕ ಶಿಕ್ಷಣ ವಿಭಾಗದಡಿ ಲಭ್ಯವಿರುವ ಸೌಲಭ್ಯಗಳು ಈ ಕೆಳಗಿನಂತಿವೆ.

ಒಳಾಂಗಣ ಕ್ರೀಡಾಲಯಗಳು
• ಬ್ಯಾಡ್ಮಿಂಟನ್ ಕೋರ್ಟ್ : 600 ಚ.ಮೀ.
• ಟೇಬಲ್ ಟೆನ್ನಿಸ್ : 400 ಚ.ಮೀ.
• ಚೆಸ್ ಮತ್ತು ಕೇರಮ್ : 100 ಚ.ಮೀ.
• ಜಿಮ್ನಾಷಿಯಂ : 450 ಚ.ಮೀ.

ಹೊರಾಂಗಣ ಕ್ರೀಡಾಲಯಗಳು
• 200 ಮೀಟರ್ ಟ್ರ್ಯಾಕ್‍ನೊಂದಿಗೆ ಮೈದಾನ (ಫುಟ್‍ಬಾಲ್, ಕ್ರಿಕೆಟ್, ಕಬಡ್ಡಿ, ಖೋ-ಖೋ, ಇತ್ಯಾದಿ)
• ವಾಲಿಬಾಲ್ 3 ಅಂಕಣಗಳು : 600 ಚ.ಮೀ.
• ಬಾಸ್ಕೆಟ್‍ಬಾಲ್ ಅಂಕಣ : 600 ಚ.ಮೀ.
• ಫುಟ್ ಬಾಲ್ : 5400 ಚ.ಮೀ.
• ಅಥ್ಲೆಟಿಕ್ ಟ್ರ್ಯಾಕ್, ಪ್ರತ್ಯೇಕ ಜಂಪಿಂಗ್ ಮತ್ತು ಥ್ರೋಯಿಂಗ್ ವಲಯಗಳು : 5400 ಚ.ಮೀ.
• ಕ್ರಿಕೆಟ್ : 4 ಅಭ್ಯಾಸ ಪಿಚ್‍ಗಳು
• ಕಬಡ್ಡಿ : 250 ಚ.ಮೀ.
• ಈಜುಕೊಳ : 325 ಚ.ಮೀ.