+91-8482-245241 regkvafsu@gmail.com

ಮೀನುಗಾರಿಕೆ ಸಂಪನ್ಮೂಲ ಮತ್ತು ನಿರ್ವಹಣಾ ವಿಭಾಗ

ವಿಭಾಗವು ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‍ಗಳ ಬೋಧನೆಯಲ್ಲಿ ತೊಡಗಿದೆ. ವಿಭಾಗದಲ್ಲಿ ಮೀನುಗಳ ವರ್ಗೀಕರಣ, ಅಂಗ ರಚನಾಶಾಸ್ತ್ರ, ಜೀವಶಾಸ್ತ್ರ ಮತ್ತು ಮೀನು ಹಾಗೂ ಚಿಪ್ಪು ಮೀನುಗಳ ಶರೀರಶಾಸ್ತ್ರ, ಒಳನಾಡು ಹಾಗೂ ಸಮುದ್ರ ಮೀನುಗಾರಿಕೆ, ಸಾಗರ ಸಸ್ತನಿಗಳು, ಸರೀಸೃಪಗಳು ಹಾಗೂ ಉಭಯಚರಗಳು, ಮೀನಿನ ಸಂತತಿಯ ಕ್ರಿಯಾತ್ಮಕತೆ ಮತ್ತು ಸಂಗ್ರಹಣಾ ಮೌಲ್ಯಮಾಪನ, ಮೀನುಗಾರಿಕೆ ನಿಯಮಗಳು, ಸಮಗ್ರ ಕರಾವಳಿ ವಲಯದ ನಿರ್ವಹಣೆ, ಸಾಗರ ಪರಿಸರ ವ್ಯವಸ್ಥೆ, ಜೀವವೈವಿಧ್ಯ ಹಾಗೂ ಸಂರಕ್ಷಣೆ, ಶೋಷಿತ ಮೀನುಗಾರಿಕಾ ಸಂಪನ್ಮೂಲಗಳ ಸಂರಕ್ಷಣೆ ಮತ್ತು ನಿರ್ವಹಣೆ, ದೂರಸಂವೇದಿ ಮತ್ತು ಮೀನುಗಾರಿಕೆಗಾಗಿ ಜಿಐಎಸ್ ಮುಂತಾದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯ ಅಧ್ಯಯನವನ್ನು ನಡೆಸಲಾಗುತ್ತಿದೆ.

ಸಂಶೋಧನೆ
• ಮೀನುಗಳ ವರ್ಗೀಕರಣ, ಜೀವಶಾಸ್ತ್ರ ಮತ್ತು ಮೀನು ಹಾಗೂ ಚಿಪ್ಪು ಮೀನುಗಳ ಶರೀರಶಾಸ್ತ್ರ
• ಮೀನು ಮತ್ತು ಚಿಪ್ಪುಮೀನು ಸಂಗ್ರಹದ ಮೌಲ್ಯಮಾಪನ
• ಪರಿಸರ ವಿಜ್ಞಾನ, ಜೀವವೈವಿಧ್ಯ ಮತ್ತು ಮೀನುಗಾರಿಕೆ ಸಂಪನ್ಮೂಲಗಳ ಸಂರಕ್ಷಣೆ, ಮ್ಯಾಂಗ್ರೋವ್‍ಗಳು (ಉಷ್ಣ ವಲಯದ ಪೊದೆಗಳು) ಮತ್ತು ಹವಳದ ಬಂಡೆಗಳ ಅಧ್ಯಯನ
• ಜಲವಾಸಿ ಪರಿಸರಕ್ಕೆ ಪರಿಸರ ಸ್ನೇಹಿ ಮಾರ್ಗಗಳ ಮಾದರಿ ಅನ್ವಯ
• ಸಂಭಾವ್ಯ ಮೀನುಗಾರಿಕೆ ವಲಯಗಳ ಅಧ್ಯಯನಗಳು
• ಮೀನುಗಾರಿಕೆ ಸಂಪನ್ಮೂಲಗಳ ನಿರ್ವಹಣೆಗಾಗಿ ದೂರ ಸಂವೇದಿ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆಗಳ (ಜಿಐಎಸ್) ಅಳವಡಿಕೆ
• ಜಲಚರ ಸಂಪನ್ಮೂಲಗಳು ಮತ್ತು ಪರಿಸರದ ಮೇಲೆ ಮಾನವಜನ್ಯ ಚಟುವಟಿಕೆಗಳ ಪ್ರಭಾವದ ಮೌಲ್ಯಮಾಪನ
• ಮೀನುಗಾರಿಕೆಯಲ್ಲಿ ಮಹಿಳಾ ಸಬಲೀಕರಣ

ಸೌಲಭ್ಯಗಳು
• ದೂರ ಸಂವೇದಿ ಮತ್ತು ಜಿಐಎಸ್ ಪ್ರಯೋಗಾಲಯ
• ಹಿಸ್ಟಾಲಜಿ ಪ್ರಯೋಗಾಲಯ
• ಮೀನಿನ ಟ್ಯಾಗ್‍ಗಳು
• ಸ್ಕೇಲ್ ರೀಡರ್ಸ್
• ನೀರಿನ ಗುಣಮಟ್ಟವನ್ನು ವಿಶ್ಲೇಷಿಸುವ ಪರಿಕರಗಳು

ಸೇವೆಗಳು
• ಮೀನುಗಳು, ಚಿಪ್ಪುಮೀನು, ಜಲವಾಸಿ ಸಸ್ತನಿಗಳು, ಸರೀಸೃಪಗಳು, ಉಭಯಚರಗಳು, ಮೊಟ್ಟೆಗಳು ಮತ್ತು ಲಾರ್ವಾಗಳ ಗುರುತಿಸುವಿಕೆ
• ಮೀನುಗಾರಿಕೆ ಮಾಹಿತಿ ಸಂಗ್ರಹಣೆ ಮತ್ತು ಮೀನುಗಾರರಿಗೆ ಪ್ರಸಾರ
• ಸಮುದ್ರ ಸಂಪನ್ಮೂಲಗಳ ನಿರ್ವಹಣೆಗಾಗಿ “ಜವಾಬ್ದಾರಿಯುತ ಮೀನುಗಾರಿಕೆ” ಕುರಿತು ಜಾಗೃತಿ ಕಾರ್ಯಕ್ರಮವನ್ನು ನಡೆಸುವುದು
• ಸಂಪನ್ಮೂಲಗಳ ಸುಸ್ಥಿರ ಬಳಕೆಯ ಕುರಿತು ಮೀನುಗಾರರಿಗೆ ಸಲಹಾ ಸೇವೆಗಳು