+91-8482-245241 regkvafsu@gmail.com

ಮೀನುಗಾರಿಕೆ ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ವಿಸ್ತರಣಾ ವಿಭಾಗ

ವಿಭಾಗವು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಸಂಖ್ಯಾಶಾಸ್ತ್ರಗಳ ವಿಧಾನಗಳು, ಮೀನುಗಾರಿಕೆ ಅರ್ಥಶಾಸ್ತ್ರ, ಮೀನುಗಾರಿಕೆ ವಿಸ್ತರಣೆ ಮತ್ತು ಸಂವಹನ ಕೌಶಲ್ಯಗಳು, ಮೀನುಗಾರಿಕಾ ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ, ಮೀನುಗಾರಿಕೆ ನೀತಿ ಮತ್ತು ಕಾನೂನು, ತಾಂತ್ರಿಕ ಬರವಣಿಗೆ ಮತ್ತು ಸಂವಹನ ಕೌಶಲ್ಯಗಳು, ತಾಂತ್ರಿಕ ವಿಧಾನಗಳು ಮತ್ತು ಸಂವಹನ ಕೌಶಲ್ಯಗಳು, ಸಂಶೋಧನಾ ವಿಧಾನಗಳು, ಸುಧಾರಿತ ಸಂಖ್ಯಾಶಾಸ್ತ್ರ ವಿಧಾನಗಳ ಮೀನುಗಾರಿಕಾ ಅಂಕಿ ಅಂಶ ವಿಶ್ಲೇಷಣೆ ಮತ್ತು ನಿರ್ವಹಣೆ ತಂತ್ರಜ್ಞಾನ ಇತ್ಯಾದಿಗಳನ್ನು ಒಳಗೊಂಡಿರುವ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‍ಗಳನ್ನು ಬೋಧಿಸುತ್ತಿದೆ.

ಸಂಶೋಧನೆ
• ಮೀನುಗಾರ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಜನಸಂಖ್ಯಾ ವಿವರದ ಅಧ್ಯಯನ
• ಮೀನುಗಾರ ಸಮುದಾಯಕ್ಕೆ ಪರ್ಯಾಯ ಜೀವನೋಪಾಯದ ಅವಕಾಶಗಳ ಮೇಲೆ ಕೇಂದ್ರೀಕೃತ ಅಧ್ಯಯನ
• ಆರ್ಥಿಕ ಕಾರ್ಯ ಸಾಧ್ಯತೆಯ ವಿಶ್ಲೇಷಣೆ
• ಮೀನುಗಾರಿಕೆಯಲ್ಲಿ ಅಂಕಿ ಅಂಶ ಅಧ್ಯಯನ

ಸೌಲಭ್ಯಗಳು
• ದತ್ತಾಂಶ ವಿಶ್ಲೇಷಣೆಗಾಗಿ ಸಾಮಾಜಿಕ ವಿಜ್ಞಾನ ತಂತ್ರಜ್ಞಾನಕ್ಕೆ ಅಂಕಿ ಅಂಶಗಳ ಪ್ಯಾಕೇಜುಗಳು
• ಅನಿಶ್ಚಿತತೆಯನ್ನು ಪ್ರಮಾಣೀಕರಿಸಲು ಮತ್ತು ಸಂಕೀರ್ಣವಾದ ಮೀನುಗಾರಿಕೆ ದತ್ತಾಂಶದ ಅರ್ಥವನ್ನು ಮಾಡಲು ಪರಿಕಲ್ಪನಾ, ಲೆಕ್ಕಾಚಾರ ಮತ್ತು ಗಣಿತದ ಉಪಕರಣಗಳು
• ವೈ-ಫೈ ಸೌಲಭ್ಯದೊಂದಿಗೆ ಕೇಂದ್ರೀಕೃತ ಗಣಕಯಂತ್ರ ಪ್ರಯೋಗಾಲಯ

ಒದಗಿಸಲಾಗುವ ಸೇವೆಗಳು
• ಮೀನು ಕೃಷಿಕರಿಗೆ ವಿಸ್ತರಣೆ ಮತ್ತು ಸಲಹಾ ಸೇವೆಗಳನ್ನು ಒದಗಿಸುವುದು
• ಕೃಷಿ ಮೇಳಗಳಲ್ಲಿ ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳ ಮಳಿಗೆಗಳು
• ಮೀನುಗಾರರಿಗೆ ಸರ್ಕಾರದ ಯೋಜನೆಗಳ ಕುರಿತು ಜಾಗೃತಿ ಕಾರ್ಯಕ್ರಮಗಳು
• ಅಪಾಯಗಳನ್ನು ತಗ್ಗಿಸುವ ಕ್ರಮಗಳ ಬಗ್ಗೆ ರೈತರಿಗೆ ಶಿಕ್ಷಣ ನೀಡುವುದು
• ಪ್ರಯೋಗಾಲಯದಿಂದ ರೈತರ ತಾಖಿಗೆ ತಂತ್ರಜ್ಞಾನ ವರ್ಗಾವಣೆ