+91-8482-245241 regkvafsu@gmail.com

ಮೀನು ಸಂಸ್ಕರಣಾ ತಂತ್ರಜ್ಞಾನ ವಿಭಾಗ

ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳ ಕೋರ್ಸ್‍ಗಳನ್ನು ವಿಭಾಗದಲ್ಲಿ ಬೋಧಿಸಲಾಗುತ್ತಿದೆ. ಇದರಲ್ಲಿ ಆಹಾರ ರಸಾಯನಶಾಸ್ತ್ರ, ಮತ್ತು ಮೀನು ಪೋಷಣೆ, ಮೀನು ಡಬ್ಬೀಕರಣ ಮತ್ತು ಶೀತ ಘನೀಕರಣ ತಂತ್ರಜ್ಞಾನ, ಮೀನು ಉತ್ಪನ್ನಗಳು ಮತ್ತು ಮೌಲ್ಯವರ್ಧನೆ, ಮೀನು ಮತ್ತು ಮೀನುಗಾರಿಕೆ ಉತ್ಪನ್ನಗಳ ಸೂಕ್ಷ್ಮಾಣುಜೀವ ವಿಜ್ಞಾನ, ಮೀನು ಉಪ-ಉತ್ಪನ್ನಗಳು ಮತ್ತು ತ್ಯಾಜ್ಯ ಬಳಕೆ, ಮೀನು ಪ್ಯಾಕೇಜಿಂಗ್ ತಂತ್ರಜ್ಞಾನ, ಮೀನು ಮತ್ತು ಮೀನುಗಾರಿಕೆ ಉತ್ಪನ್ನಗಳ ಗುಣಮಟ್ಟದ ಭರವಸೆ ಮುಂತಾದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‍ಗಳನ್ನು ನೀಡಲಾಗುತ್ತಿದೆ.

ಸಂಶೋಧನೆ
• ಮೀನು ಮತ್ತು ಮೀನುಗಾರಿಕೆ ಉತ್ಪನ್ನಗಳ ಗುಣಮಟ್ಟದ ಭರವಸೆ
• ಉತ್ಪನ್ನ ಅಭಿವೃದ್ಧಿ
• ಸಂಸ್ಕರಣೆಯ ಸಮಯದಲ್ಲಿ ಸಸಾರಜನಕಗಳ ರಚನೆಯ ಅಧ್ಯಯನ
• ಬಯೋಆಕ್ಟಿವ್ ಪೆಪ್ಟೈಡ್‍ಗಳು ಮತ್ತು ಅವುಗಳ ಜೈವಿಕ ಅಣುಗಳು
• ಮೀನುಗಾರಿಕೆ ಉತ್ಪನ್ನಗಳ ಉಷ್ಣ ಸಂಸ್ಕರಣೆ

ಸೌಲಭ್ಯಗಳು
• ಮೀನು ಸಂಸ್ಕರಣಾ ಘಟಕಗಳು
• ಮೀನಿನ ಘನೀಕರಣ ಮತ್ತು ಘನೀಕೃತ ಸಂಗ್ರಹಣೆ
• ಮೀನಿನ ಹ್ಯಾಮ್ ಮತ್ತು ಸಾಸೇಜ್ ಉತ್ಪಾದನಾ ಘಟಕ
• ಮೀನಿನ ಕ್ಯಾನಿಂಗ್ ಮತ್ತು ರಿಟಾರ್ಟ್ ಪೌಚ್ ಸಂಸ್ಕರಣ ಘಟಕ
• ಮೀನಿನ ಉಪ ಉತ್ಪನ್ನಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನಾ ಘಟಕ
• ಸಸಾರಜನಕ ರಸಾಯನಶಾಸ್ತ್ರ ಪ್ರಯೋಗಾಲಯ (ರಿಯೋಮೀಟರ್, ಹೆಚ್‍ಪಿಎಲ್‍ಸಿ, ಜಿಸಿ)
• ಗುಣಮಟ್ಟ ನಿಯಂತ್ರಣ ಪ್ರಯೋಗಾಲಯ

ಒದಗಿಸಲಾಗುವ ಸೇವೆಗಳು
• ಕಡಿಮೆ ಮೌಲ್ಯದ ಮೀನುಗಳಿಂದ ಮೌಲ್ಯವರ್ಧಿತ ಉತ್ಪನ್ನಗಳ ಪ್ರಾಮುಖ್ಯತೆಯ ಬಗ್ಗೆ ಪ್ರದರ್ಶನ
• ವೈಜ್ಞಾನಿಕವಾಗಿ ಮೀನು ಒಣಗಿಸುವಿಕೆ ಹಾಗೂ ಉಪ್ಪು ಹಾಕಿ ಒಣಗಿದ ಮೀನುಗಳ ಬಗ್ಗೆ ಪ್ರದರ್ಶನ
• ಸಮುದ್ರಾಹಾರ ಸಂಸ್ಕರಣ ಪದಾರ್ಥಗಳ ಸಂಸ್ಕರಣಾ ಘಟಕಗಳ ನೈರ್ಮಲ್ಯ ಮತ್ತು ನೈರ್ಮಲ್ಯದ ಕುರಿತು ಪ್ರದರ್ಶನ
• ಮೀನಿನ ಉಪ ಉತ್ಪನ್ನಗಳ ತಯಾರಿಕೆ