+91-8482-245241 regkvafsu@gmail.com

ಜಲಚರಗಳ ಆರೋಗ್ಯ ನಿರ್ವಹಣಾ ವಿಭಾಗ

ಈ ವಿಭಾಗವು ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‍ಗಳನ್ನು ನೀಡುತ್ತದೆ. ವಿಭಾಗವು ಸೂಕ್ಷ್ಮಜೀವಾಣು ವಿಜ್ಞಾನ, ಮೀನು ಮತ್ತು ಚಿಪ್ಪುಮೀನು ರೋಗಶಾಸ್ತ್ರ, ಮೀನಿನ ರೋಗ ನಿರೋಧಕ ಶಕ್ತಿ, ಜಲಚರಗಳ ಚಿಕಿತ್ಸೆಗಳು, ಮೀನು ಮತ್ತು ಚಿಪ್ಪು ಮೀನುಗಳ ಸೂಕ್ಷ್ಮಜೀವಾಣು ಮತ್ತು ಪರಾವಲಂಬಿ ರೋಗಗಳಲ್ಲಿ ಪರಿಣತಿಯನ್ನು ಹೊಂದಿದೆ.

ಸಂಶೋಧನೆ
• ಜಲಚರ ಪ್ರಾಣಿಗಳು ಹಾಗೂ ಸೂಕ್ಷ್ಮಾಣು ಜೀವಿಗಳ ಅನ್ವಯಿಕ ರೋಗ ನಿರ್ಣಯ ಮತ್ತು ಸಾರ್ವಜನಿಕ ಆರೋಗ್ಯದ ಮಹತ್ವ
• ಜಲಚರ ಪ್ರಾಣಿಗಳಲ್ಲಿ ಜೀನ್‍ಗಳ ಅಭಿವ್ಯಕ್ತಿ
• ಲಸಿಕೆಗಳು ಮತ್ತು ರೋಗನಿರೋಧಕಗಳ ಅಭಿವೃದ್ಧಿ
• ಮೀನಿನ ಸುರಕ್ಷತೆಯ ಭರವಸೆಯಲ್ಲಿ ಆಣ್ವಿಕ ತಂತ್ರಗಳು
• ಮೀನುಗಾರಿಕೆಯಲ್ಲಿ ಜೈವಿಕ ತಂತ್ರಜ್ಞಾನ

ಸೌಲಭ್ಯಗಳು
• ಸೂಕ್ಷ್ಮಾಣು ಜೀವವಿಜ್ಞಾನ ಪ್ರಯೋಗಾಲಯ
• ಆಣ್ವಿಕ ರೋಗನಿರ್ಣಯ ಪ್ರಯೋಗಾಲಯ - ಪಾಲಿಮೆರೇಸ್ ಸರಪಳಿ ಪ್ರತಿಕ್ರಿಯೆ, ರಿವರ್ಸ್ ಟ್ರಾನ್ಸ್‍ಕ್ರಿಪ್ಟೇಸ್ - ಪಿಸಿಆರ್, ರಿಯಲ್‍ಟೈಮ್ ಪಿಸಿಆರ್, ಎಲೆಕ್ಟ್ರೋಫೋರೆಸಿಸ್, ಜೆಲ್ ದಸ್ತಾವೇಜು ಮತ್ತು ವಿಶ್ಲೇಷಣೆ, ಪ್ರೋಬ್ ಹೈಬ್ರಿಡೈಸೇಶನ್ ಇತ್ಯಾದಿ.
• ಮರುಸಂಯೋಜಕ ಡಿಎನ್‍ಎ ಮತ್ತು ಪ್ರೋಟೀನ್ ಅಭಿವ್ಯಕ್ತಿ ಸೌಲಭ್ಯ
• ಕೋಶ ಕೃಷಿ ಪ್ರಯೋಗಾಲಯ
• ಬಯೋಇನ್ಫಮ್ರ್ಯಾಟಿಕ್ಸ್ ಸೆಂಟರ್
• ಮಣ್ಣು ಮತ್ತು ನೀರು ಪ್ರಯೋಗಾಲಯ

ಸೇವೆಗಳು
• ಸೀಗಡಿಗಳಲ್ಲಿ ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ವೈರಸ್‍ಗಳ ಪರೀಕ್ಷೆ
• ನೀರು, ಮಂಜುಗಡ್ಡೆ, ಆಹಾರ, ಹಾಲು ಇತ್ಯಾದಿಗಳ ಸೂಕ್ಷ್ಮಾಣು ಜೀವವಿಜ್ಞಾನದ ವಿಶ್ಲೇಷಣೆ.
• ನೀರಿನ ಯೋಗ್ಯತೆ ಪರೀಕ್ಷೆ
• ಕೈಗಾರಿಕಾ ಹೊರಹರಿವಿನ ನೀರಿನ ವಿಶ್ಲೇಷಣೆ
• ಸಮುದ್ರಾಹಾರದ ಗುಣಮಟ್ಟದ ಮೌಲ್ಯಮಾಪನ
• ಕುಡಿಯುವ ನೀರು ಮತ್ತು ಕೊಳದ ನೀರಿನ ರಾಸಾಯನಿಕ ವಿಶ್ಲೇಷಣೆ
• ಬಯೋಇನ್ಫಮ್ರ್ಯಾಟಿಕ್ಸ್ ವಿಶ್ಲೇಷಣೆ ಮತ್ತು ತರಬೇತಿ