+91-8482-245241 regkvafsu@gmail.com

ಹೈನು ಸೂಕ್ಷ್ಮಾಣುಜೀವಿ ವಿಜ್ಞಾನ

ಸೂಕ್ಷ್ಮಜೀವಿಗಳು ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ವರ ಅಥವಾ ವಿಷವಾಗಬಹುದು. ಹೈನು ಸೂಕ್ಷ್ಮಜೀವಾಣುಶಾಸ್ತ್ರ ವಿಭಾಗದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಸೂಕ್ಷ್ಮ ಜೀವವಿಜ್ಞಾನ, ಲ್ಯಾಕ್ಟಿಕ್ ಆಮ್ಲ ಉತ್ಪಾದಿಸುವ ಅಣು ಜೀವಿಗಳು, ಪ್ರೋಬಯಾಟಿಕ್‌ಗಳು, ಪ್ರಿಬಯಾಟಿಕ್‌ಗಳು, ಹುದುಗುವ ಹಾಲಿನ ಉತ್ಪನ್ನಗಳ ಅಭಿವೃದ್ಧಿ ಕುರಿತು ಸಂಶೋಧನಾ ಕಾರ್ಯಗಳನ್ನು ಹಾಗು ಶುದ್ಧ ಹಾಲಿನ ಉತ್ಪಾದನೆ ಬಗ್ಗೆ ತರಬೇತಿ ಕಾರ್ಯಕ್ರಮ ಮತ್ತು ಉತ್ತಮ ಗುಣಮಟ್ಟವನ್ನು ಸಾಧಿಸಲು ಹೈನು ಮತ್ತು ಆಹಾರ ಸಂಸ್ಕರಣಾ ಕೈಗಾರಿಕೆಗಳ ಅಭಿವೃದ್ಧಿಗೊಳಿಸುವ ಸಲಹೆ ಮುಂತಾದವುಗಳನ್ನು ವಿಸ್ತರಣಾ ಚಟುವಟಿಕೆಗಳ ಮೂಲಕ ನೀಡಲಾಗುತ್ತದೆ. ಆಧುನಿಕ ಜಗತ್ತಿನಲ್ಲಿ ಸೂಕ್ಷ್ಮ ಜೀವವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನದ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಹೈನು ಸೂಕ್ಷ್ಮಜೀವಾಣುಶಾಸ್ತ್ರದ ಪಠ್ಯಕ್ರಮಗಳನ್ನು ಪ್ರಾಯೋಗಿಕವಾಗಿ ಬೋಧಿಸುವ ಮೂಲಕ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉದ್ಯೋಗಗಳನ್ನು ಪಡೆದುಕೊಳ್ಳಲು ಮತ್ತು ಉನ್ನತ ಅಧ್ಯಯನವನ್ನು ಮಾಡಲು ಅಣಿಗೊಳಿಸುವುದು.