ಡಾ. ಸತೀಶ, ಜಿ.ಎಂ.
|
ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು |
ವೃತ್ತಿಯ ವಿವರ: |
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಹ ಸಂಶೋಧಕರಾಗಿ 2007 ರಿಂದ 2008 ರವರೆಗೆ ಒಂದು ವರ್ಷ ಅನುಭವ ಪಡೆದಿದ್ದಾರೆ. 2008 ರಿಂದ 2012 ರವರೆಗೆ 4 ವರ್ಷ ಪಶುವೈದ್ಯಾಧಿಕಾರಿಯಾಗಿ ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. 2012 ರಿಂದ ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಮಾಲೆಕ್ಯುಲಾರ್ ಜೆನೆಟಿಕ್ಸ್ ಕ್ಷೇತ್ರದಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ೧೪ ವರ್ಷಗಳಿಂದ ಪಶು ಸಂಗೋಪನೆ ಇಲಾಖೆ ಮತ್ತು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್ನ ಅಂಗ ಸಂಸ್ಥೆಯಾದ ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗದಲ್ಲಿ ವಿವಿಧ ಸ್ಥರಗಳಲ್ಲಿ ಕರ್ಯ ನಿರ್ವಹಿಸಿದ್ದು, ಪ್ರಸ್ತುತ ಪಶು ವೈದ್ಯ ಮತ್ತು ಪಶು ಸಂಗೋಪನೆ ಕ್ಷೇತ್ರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು ಇದರ ಜೊತೆಗೆ ಸಹಾಯಕ ಪ್ರಾಧ್ಯಾಪಕರಾಗಿ ಬೋಧನೆ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ಸಾಕಷ್ಟು ಕರ್ಯಕ್ರಮಗಳನ್ನು ನಿರ್ವಹಿಸುತ್ತಿದ್ದಾರೆ. ಸ್ನಾತಾಕೋತ್ತರ ಪದವಿಯಲ್ಲಿ ಗೌರವಾನಿತ ರಾಜ್ಯಪಾಲರಿಂದ ಚಿನ್ನದ ಪದಕ ಪಡೆದಿದ್ದು ಹಾಗೂ ಡಾಕ್ಟರೇಟ್ ಪದವಿಯಲ್ಲಿ ವಿಶ್ವವಿದ್ಯಾಲಯದ ೨೦೨೦-೨೧ ನೇ ಸಾಲಿನ ಚಿನ್ನದ ಪದಕ ಲಭಿಸಿರುತ್ತದೆ. ರಾಷ್ಟಿçÃಯ ವಿಚಾರ ಸಂಕೀರ್ಣದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ “ಃesಣ ಖeseಚಿಡಿಛಿh Posಣeಡಿ ಂತಿಚಿಡಿಜ” ಮತ್ತು ೨೦೧೯ ನೇ ಸಾಲಿನ ‘ರಾಷ್ಟಿçÃಯ ಶಿಕ್ಷಣ ರತ್ನ ಪ್ರಶಸ್ತಿ’ ಲಭಿಸಿರುತ್ತದೆ. ರೈತರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಶು ಸಂಗೋಪನೆ ಕುರಿತಾದ ಸುಮರು ೪೩ ಜನಪ್ರಿಯ ಲೇಖನಗಳು, ೭ ಪುಸ್ತಕ ಮತ್ತು ೩೦ ಭಿತ್ತಿ ಪತ್ರಿಕೆಗಳನ್ನು ಪ್ರಕಟಿಸಿರುತಾರೆ. ಇದರ ಜೊತೆಗೆ ರೈತರ ಅನುಕೂಲಕ್ಕಾಗಿ ಸುಮಾರು ೧೫ ತರಬೇತಿ ಕಾರ್ಯಗಾರಗಳನ್ನು ಹಮ್ಮಿಕೊಂಡಿರುತಾರೆೆÉ ಹಾಗೂ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ರೈತರಿಗೆ ಉಪಯೋಗವಾಗುವ ಹಲವಾರು ಕಾರ್ಯಕ್ರಮಗಳನ್ನು ನೀಡಿರುತಾರೆ. |
ಪ್ರಶಸ್ತಿಗಳು: |
|
ಪ್ರಕಟಣೆಗಳು |
|