+91-8482-245241 regkvafsu@gmail.com

ಡಾ. ಶ್ರೀಧರ್ ಎನ್ ಬಿ.


ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಂ.ವಿ.ಎಸ್ಸಿ, ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: +919448059777
ಮಿಂಚಂಚೆ: shridharvet@gmail.com

ವೃತ್ತಿಯ ವಿವರ:

ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ 11.03.1992 ರಿಂದ 14.07.2005 ರವರೆಗೆ ಪಶುವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 15.07.2005 ರಂದು ಸಹಾಯಕ ಪ್ರಾಧ್ಯಾಪಕರಾಗಿ ವಿಶ್ವವಿದ್ಯಾಲಯಕ್ಕೆ ಸೇರಿದರು. 20.01.2012 ರಿಂದ ಸಹ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಪ್ರಸ್ತುತ ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರದ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕರ್ನಾಟಕದಲ್ಲಿರುವ ಹಲವಾರು ನಿಗೂಢ ಕಾಯಿಲೆಗಳ ಬಗ್ಗೆ, ಪಶ್ಚಿಮ ಘಟ್ಟ ಜಿಲ್ಲೆಗಳಲ್ಲಿರುವ ಸಸ್ಯಜನ್ಯ ವಿಷಬಾಧೆಗಳಾದ ಬಸರಿ ಸೊಪ್ಪಿನ ವಿಷಬಾಧೆ, ವಾಯುವಿಳಂಗ ಗಿಡದ ವಿಷಬಾಧೆ, ಮುಳ್ಳಿಲ್ಲದ ನಾಚಿಕೆ ಗಿಡದ ವಿಷಬಾಧೆ, ಕಳಲೆಯ ವಿಷಬಾಧೆ, ಅಡಿಕೆ ತೊಗರಿನ ವಿಷಬಾಧೆ, ಶಿಲೀಂದ್ರ ಪೀಡಿತ ವಿವಿಧ ಮೇವುಗಳ ವಿಷಬಾಧೆಗಳ ಬಗ್ಗೆ ಸಂಶೋಧನೆ ಮಾಡಿದ್ದಾರೆ. ಇವರು 35 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತು 10 ಡಾಕ್ಟರೇಟ್ ವಿದ್ಯಾರ್ಥಿಗಳಿಗೆ ಪ್ರಧಾನ ಮಾರ್ಗದರ್ಶಕರಾಗಿದ್ದು 94 ಕ್ಕಿಂತ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳ ಸಲಹಾ ಸಮಿತಿಯ ಸದಸ್ಯರಾಗಿರುತ್ತಾರೆ.

2017 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದ ಅನುದಾನದಿಂದ ಶಿವಮೊಗ್ಗದಲ್ಲಿ ಪ್ರಾರಂಭವಾಗಿರುವ ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನಾ ಸಂಸ್ಥೆಯ ಪ್ರಧಾನ ಸಂಶೋಧಕರು ಮತ್ತು ಮುಖ್ಯಸ್ಥರಾಗಿ, ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಶಸ್ತಿಗಳು:
  • ಕರ್ನಾಟಕ ಪಶುವೈದ್ಯಕೀಯ ಸಂಘದಿಂದ ಉತ್ತಮ ಪಶುವೈದ್ಯ ಪ್ರಶಸ್ತಿ.
  • ಪ್ರಾಣಿ ಕಲ್ಯಾಣಕ್ಕಾಗಿ ಅಕಾಡೆಮಿ ಆಫ್ ಸೈನ್ಸಸ್‍ನ ಫೆಲೋ.
  • ಪಿ.ಹೆಚ್.ಡಿ. ಯಲ್ಲಿ ಚಿನ್ನದ ಪದಕ.
  • ಶ್ರೇಷ್ಠ ಸಂಶೋಧನಾ ಪ್ರಬಂಧ ಲೇಖನ ಮತ್ತು ಶ್ರೇಷ್ಠ ಭಿತ್ತಿಚಿತ್ರ ಪ್ರಶಸ್ತಿ.
  • “ಹೈನು ಹೊನ್ನು” ಪುಸ್ತಕಕ್ಕೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕರ್ನಾಟಕ ಸರ್ಕಾರದಿಂದ 2014 ನೇ ಸಾಲಿನ “ಶ್ರೇಷ್ಠ ಲೇಖಕ” ರಾಜ್ಯ ಪ್ರಶಸ್ತ್ತಿ.
  • “ಜಾನುವಾರುಗಳಲ್ಲಿ ವಿಷಬಾಧೆ” ಪುಸ್ತಕಕ್ಕೆ ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನ 2016 ನೇ ಸಾಲಿನ “ಶ್ರೇಷ್ಠ ಕನ್ನಡ ಕೃಷಿ ಪುಸ್ತಕ” ಪ್ರಶಸ್ತಿ ದೊರೆತಿರುತ್ತದೆ.
  • ಉತ್ತಮ ಸಂಶೋಧನಾ ಯೋಜನೆಗಳನ್ನು ಪ್ರಧಾನ ಸಂಶೋಧಕರಾಗಿ ನಿರ್ವಹಿಸಿದ್ದಕ್ಕೆ ಇವರಿಗೆ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ 15 ಬಂಗಾರದ ಪದಕ ನೀಡಿರುತ್ತಾರೆ.
  • ಉತ್ತಮ ಸಂಶೋಧನೆಗಾಗಿ ಮಾರ್ಗದರ್ಶನ ಮಾಡಿದ ಅನೇಕ ವಿದ್ಯಾರ್ಥಿಗಳು "ಯುವ ವಿಜ್ಞಾನಿ" ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 165; ವಿಸ್ತರಣಾ ಲೇಖನಗಳು 120; ಪುಸ್ತಕಗಳು 11; ತರಬೇತಿ ಅಧ್ಯಾಯಗಳು 50; ಪತ್ರಿಕಾ ಅಂಕಣಗಳು 50;