+91-8482-245241 regkvafsu@gmail.com

ಡಾ. ವಿ. ನಾಗಭೂಷಣ.


ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಂ.ವಿ.ಎಸ್ಸಿ ಮತ್ತು ಪಿ.ಹೆಚ್.ಡಿ
ಮೊಬೈಲ್ ಸಂಖ್ಯೆ: +919902204994;   7760912777
ಮಿಂಚಂಚೆ: nkuliyadi@yahoo.com;  nagabhushana.kuliyadi@gmail.com

ವೃತ್ತಿಯ ವಿವರ:

1989ರಲ್ಲಿ ಆರು ತಿಂಗಳು ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ "ತುಂಗಭದ್ರಾ ನದಿ ಮಾಲಿನ್ಯದಿಂದ ಪಶುಗಳ ಆರೋಗ್ಯದ ಮೇಲಿನ ದುಷ್ಪರಿಣಾಮ" ಎನ್ನುವ ಸಂಶೋಧನಾ ಪ್ರಾಯೋಜನೆಯಲ್ಲಿ ಕೆಲಸ ನಿರ್ವಹಿಸಿದರು. ಸೆಪ್ಟೆಂಬರ್, 1989ರಿಂದ ಧಾರವಾಡ ಕೃಷಿ ವಿಶ್ವವಿದ್ಯಾಲಯದಡಿ ಬೀದರ ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಾಣಿ ಆಹಾರ ಶಾಸ್ತ್ರ ವಿಭಾಗದಲ್ಲಿ ಇನ್‍ಸ್ಟ್ರಕ್ಟರ್ ಹುದ್ದೆಗೆ ನಿಯುಕ್ತಿಗೊಂಡು ಬೋಧನೆ, ಸಂಶೋಧನೆ ಮತ್ತು ವಿಸ್ತರಣೆ ಕಾರ್ಯವನ್ನು ಮಾಡಿದ್ದಾರೆ. 1992 ರಿಂದ 1995 ರವರೆಗೆ ದೇವಣಿ ಪಶು ಸಂವರ್ಧನಾ ಕೇಂದ್ರದಲ್ಲಿ ಕ್ಷೇತ್ರ ಅಧೀಕ್ಷಕರಾಗಿ ಕೆಲಸ ನಿರ್ವಹಿಸಿದ್ದಾರೆ. ಸಹಾಯಕ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹುದ್ದೆಗಳಲ್ಲಿ ಕೆಲಸ ವಿರ್ವಹಿಸಿ 2007ರಿಂದ ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕರಾಗಿ ಪ್ರಸ್ತುತ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಎರಡು ಡಾಕ್ಟರೇಟ್ ವಿದ್ಯಾರ್ಥಿಗಳಿಗೆ ಕೋ-ಛೇರ್ಮನ್ ಹಾಗೂ 5 ಎಮ್.ವಿ.ಎಸ್ಸಿ. ವಿದ್ಯಾರ್ಥಿಗಳಿಗೆ ಛೇರ್ಮನ್ ಆಗಿಯೂ ಸುಮಾರು 15ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಂಶೋಧನಾ ಮಂಡಳಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಅನೇಕ ಸಿಬ್ಬಂದಿ ಸಂಶೋಧನೆಗಳಲ್ಲದೇ, ಡಾಬರ್ ಆಯುರ್ ವೆಟ್, ಎನ್.ಆರ್.ಸಿ. (ಸೋರ್ಗಂ), ಡಿ.ಬಿ.ಟಿ., ಸುಜಲಾ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅನುದಾನಿತ ಪ್ರಾಯೋಜನೆಗಳಲ್ಲಿ ಸಂಶೋಧನೆ ಹಾಗೂ ವಿಸ್ತರಣೆ ಕಾರ್ಯವನ್ನು ಮಾಡಿದ್ದಾರೆ.

ಪ್ರಕಟಣೆಗಳು
  • ಸಂಶೋಧನಾ ಪ್ರಕಟಣೆಗಳು 50.