+91-8482-245241 regkvafsu@gmail.com

ಡಾ. ಉಮೇಶ, ಬಿ. ಯು.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಂ.ವಿ.ಎಸ್ಸಿ ಮತ್ತು ಪಿ.ಹೆಚ್.ಡಿ. (ಕುಕ್ಕಟ ಶಾಸ್ತ್ರ), ಪಿಜಿಡಿ (ಎಇಎಮ್).ಿ.
ಮೊಬೈಲ್ ಸಂಖ್ಯೆ:+91 9916208462
ಮಿಂಚಂಚೆ: umeshbu71@gmail.com

ವೃತ್ತಿಯ ವಿವರ:

1997-2001 ರವರೆಗೆ ವೆಂಕಟೇಶ್ವರ ಹ್ಯಾಚರೀಸ್ ಲಿಮಿಟೆಡ್, ಹೊಸೂರು ಮತ್ತು ದುರ್ಗಾ ಆಗ್ರೋ ಫಾರ್ಮ, ಗೋರಖಪುರ್‍ನಲ್ಲಿ ಕುಕ್ಕಟ ಆಹಾರ ತಜ್ಞರಾಗಿ ಕಾರ್ಯನಿರ್ವಹಿಸಿದ್ದಾರೆ. 2001ರಿಂದ 2009ರವರೆಗೆ 8 ವರ್ಷ ಪಶುವೈದ್ಯಾಧಿಕಾರಿಯಾಗಿ ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. 2009 ರಿಂದ 2012 ರವರೆಗೆ 3 ವರ್ಷ ಸಹಾಯಕ ಪ್ರಾಧ್ಯಾಪಕರಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಕೃಷಿವಿಜ್ಞಾನ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ. 2012 ರಿಂದ ಸಹಾಯಕ ಪ್ರಾಧ್ಯಾಪಕರಾಗಿ ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುಕ್ಕುಟ ಘಟಕ ಮತ್ತು ಮರಿ ಉತ್ಪಾದನಾ ಘಟಕದ ಉಸ್ತುವಾರಿ ಹೊತ್ತಿರುವ ಇವರು ಕೋಳಿ ಆಹಾರದಲ್ಲಿ ನಾರಿನಾಂಶ, ಫೈಟೇಸ್ ಕಿಣ್ವ, ಹತ್ತಿ ಕಾಳಿನ ಹಿಂಡಿ, ನುಗ್ಗೆ ಸೊಪ್ಪಿನ ಪುಡಿ ಇತ್ಯಾದಿ ವಿಷಯಗಳ ಕುರಿತು ಸಂಶೋಧನೆ ಕೈಗೊಂಡಿರುತ್ತಾರೆ.

ಪ್ರಶಸ್ತಿಗಳು:
  • ಇಪ್ಸಕಾನ್ ಅಖಿಲ ಭಾರತ ಕುಕ್ಕುಟ ವಿಜ್ಞಾನ ಸಮ್ಮೇಳನದಲ್ಲಿ ಉತ್ತಮ ಪೋಸ್ಟರ್ ಪ್ರಶಸ್ತಿ (2014)
ಪ್ರಕಟಣೆಗಳು
  • ಸಂಶೋಧನಾ ಪ್ರಕಟಣೆಗಳು 12; ಅಮೂರ್ತ ಲೇಖನಗಳು 25; ಪುಸ್ತಕಗಳು 03; ಹಸ್ತ ಮುದ್ರಿಕೆ 12; ವಿಸ್ತರಣಾ ಲೇಖನಗಳು 25; ತರಬೇತಿ ಕೈಪಿಡಿ 22; ರೈತ/ ಪಶುವೈದ್ಯಾಧಿಕಾರಿಗಳ ತರಬೇತಿ ಆಯೋಜನೆ 35.