+91-8482-245241 regkvafsu@gmail.com

ಪಶುವೈದ್ಯಕೀಯ ಸೂಕ್ಷ್ಮಾಣುಜೀವಿ ವಿಜ್ಞಾನ ವಿಭಾಗ

ಪಶುವೈದ್ಯಕೀಯ ರೋಗವಿಜ್ಞಾನ ವಿಭಾಗವು ಸ್ನಾತಕ (ಬಿವಿಎಸ್ಸಿ ಮತ್ತು ಎ.ಎಚ್.) ಮತ್ತು ಸ್ನಾತಕೋತ್ತರ (ಎಂವಿಎಸ್ಸಿ) ವಿದ್ಯಾರ್ಥಿಗಳಿಗೆ ಬೋಧನೆಯಲ್ಲಿ ತೊಡಗಿದೆ. ಪ್ರಯೋಗಾಲಯದಲ್ಲಿ ರೈತರ ಜಾನುವಾರುಗಳಿಗೆ ಅಗತ್ಯವಾದ ಮರಣೋತ್ತರ ಪರೀಕ್ಷೆ, ಮೂತ್ರ ಹಾಗೂ ರಕ್ತ ಪರೀಕ್ಷೆ, ಅಂಗಾಂಶರೋಗ ಶಾಸ್ತ್ರ, ಜೀವಕೋಶ ಶಾಸ್ತ್ರ, ರೂಪಾಂತರ ಅಳತೆ ಇತ್ಯಾದಿ ಸೇವೆಗಳನ್ನು ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳು, ರೈತರು ಮತ್ತು ಸಾರ್ವಜನಿಕರ ಉಪಯೋಗಕ್ಕಾಗಿ ರೋಗಶಾಸ್ತ್ರ ವಸ್ತುಸಂಗ್ರಹಾಲಯವಿದೆ. ಪ್ರಯೋಗಾಲಯ ಪ್ರಾಣಿಗಳಲ್ಲಿ ಸಂಧಿ ಉರಿಯೂತ ಮತ್ತು ದೀರ್ಘಾವಧಿಯ ಮೂತ್ರಪಿಂಡ ವೈಫಲ್ಯತೆ ಕುರಿತಾದ ಮತ್ತು ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸುವ ಕುರಿತು ಮತ್ತು ಕೋಳಿರೋಗ ನಿರ್ಣಯ ಕುರಿತಾದ ಸಂಶೋಧನೆ ನಡೆಸಲಾಗುತ್ತಿದೆ.