+91-8482-245241 regkvafsu@gmail.com

ಪ್ರಾಣಿ ತಳಿ ಅನುವಂಶೀಯತೆ ಮತ್ತು ತಳಿ ವಿಜ್ಞಾನ ವಿಭಾಗ

ಪ್ರಾಣಿ ತಳಿ ಅನುವಂಶೀಯತೆ ಮತ್ತು ಸಂವರ್ಧನಾ ವಿಭಾಗವು ಎರಡನೇ ವರ್ಷದ ಬಿವಿಎಸ್ಸಿ ಮತ್ತು ಎ.ಎಚ್. ಸ್ನಾತಕ ವಿದ್ಯಾರ್ಥಿಗಳಿಗೆ ಹಾಗೂ ಎಂವಿಎಸ್ಸಿ ವಿದ್ಯಾರ್ಥಿಗಳಿಗೆ ಬೋಧನೆಯಲ್ಲಿ ತೊಡಗಿರುತ್ತದೆ. ವಿಭಾಗವು ಬೋಧನೆಯೊಂದಿಗೆ ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದೆ. ದೇಶಿ ಜಾನುವಾರು ತಳಿಗಳ ಕ್ಷೇತ್ರ ಮಟ್ಟದ ಸಾಮಥ್ರ್ಯ ದಾಖಲಾತಿ ಮತ್ತು ಸಂರಕ್ಷಣೆ ಯೋಜನೆಗಳು ಪ್ರಮುಖವಾಗಿರುತ್ತದೆ. ವಿಭಾಗದಲ್ಲಿ ಹಲವು ಬಾಹ್ಯ ಅನುದಾನದ ಹಾಗೂ ವಿಶ್ವವಿದ್ಯಾಲಯದ ಧನ ಸಹಾಯ ಸಂಶೋಧನಾ ಯೋಜನೆಗಳನ್ನು ಕೈಗೊಳ್ಳಲಾಗಿದೆ. ರೈತರಿಗಾಗಿ ಜಾನುವಾರು ಆಯ್ಕೆ, ಸಂವರ್ಧನೆ ಮತ್ತು ತಳಿ ಸಂರಕ್ಷಣೆ ವಿಷಯಗಳಲ್ಲಿ ತರಬೇತಿಯನ್ನು ಆಯೋಜಿಸಲಾಗಿದೆ. ಪಶುವೈದ್ಯಾಧಿಕಾರಿಗಳಿಗೆ ಹಲವು ತರಬೇತಿ ಹಾಗೂ ಕಾರ್ಯಾಗಾರಗಳನ್ನು ನಡೆಸಲಾಗಿದೆ. ಮಹಾವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಸಂಶೋಧನೆಗಳಲ್ಲಿ ಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿದ ಸಲಹೆಗಳನ್ನು ನೀಡಲಾಗುತ್ತಿದೆ.