ಪ್ರಾಣಿ ಆಹಾರ ವಿಜ್ಞಾನ ವಿಭಾಗ
ಪ್ರಾಣಿ ಆಹಾರ ವಿಜ್ಞಾನ ವಿಭಾಗವು ಸ್ನಾತಕ ಮತ್ತು ಸ್ನಾತಕೋತ್ತರ ಬೋಧನೆಯಲ್ಲಿ ತೊಡಗಿದೆ. ಈ ವಿಭಾಗವು ಸುಸಜ್ಜಿತ ಸೌಲಭ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಧಾನ್ಯಗಳಲ್ಲಿ ಮತ್ತು ಮೇವಿನಲ್ಲಿ ಇರುವ ಪೋಷಕಾಂಶಗಳನ್ನು ಕಂಡುಹಿಡಿಯಬಲ್ಲ ಗ್ಯಾಸ್ ಕ್ರೊಮ್ಯಾಟೋಗ್ರಫಿ ಮತ್ತು ಪ್ರನಾಳದಲ್ಲಿ ಮೆಲುಕುಚೀಲ ಹುದುಗುವಿಕೆಯ ತಂತ್ರವನ್ನು ನಿರ್ವಹಿಸುವ ಸಾಧನಗಳ ಸೌಲಭ್ಯವಿದ್ದು ವಿಭಿನ್ನ ಸಂಶೋಧನೆಗಳಲ್ಲಿ ತೊಡಗಿದೆ. ತರಬೇತಿ, ಕಾರ್ಯಾಗಾರ, ತಂತ್ರಜ್ಞಾನಗಳ ಪ್ರದರ್ಶನಗಳನ್ನು ರೈತರಿಗೆ ಹಾಗೂ ಪಶುವೈದ್ಯರಿಗೆ ಆಯೋಜಿಸುವಲ್ಲಿ ವಿಭಾಗವು ತೊಡಸಿಕೊಂಡಿದೆ.
©2019 copyright kvafsu.edu.in
Powered by : Premier Technologies