ಪಶುವೈದ್ಯಕೀಯ ಮತ್ತು ಪಶುಪಾಲನಾ ವಿಸ್ತರಣಾ ವಿಭಾಗ
ರೈತರು, ಕ್ಷೇತ್ರ ಕಾರ್ಯಕರ್ತರು ಮತ್ತು ಮಹಾವಿದ್ಯಾಲಯದ ವಿಜ್ಞಾನಿಗಳ ಮಧ್ಯೆ ಸಂಪರ್ಕ ಕೊಂಡಿಯಾಗಿ ವಿಭಾಗವು ಕಾರ್ಯನಿರ್ವಹಿಸುತ್ತಿದೆ. ವಿಸ್ತರಣಾ ಚಟುವಟಿಕೆಗಳನ್ನು ಸಮರ್ಪಕವಾಗಿ ಸಂಯೋಜಿಸಲು ಶ್ರಮಿಸುತ್ತಿದೆ. ಸ್ನಾತಕ ಬಿವಿಎಸ್ಸಿ ಮತ್ತು ಎಎಚ್ ವಿದ್ಯಾರ್ಥಿಗಳ ಬೋಧನೆ ಮತ್ತು ವಿಸ್ತರಣೆಗೆ ಬೇಕಾಗಿರುವ ಶ್ರವಣ ದೃಶ್ಯ ಕೊಠಡಿ, ಸಂವಾದ ಕೊಠಡಿ, ಸಂಗ್ರಹಾಲಯ, ಇತ್ಯಾದಿ ಸೌಲಭ್ಯಗಳಿವೆ. ಜಾನುವಾರು ಸಾಕಾಣಿಕೆದಾರರ ಜೀವನೋಪಾಯ ಮತ್ತು ಪಶುಪಾಲನಾ ತಂತ್ರಜ್ಞಾನ ವರ್ಗಾವಣೆಗೆ ಸಂಬಂಧಪಟ್ಟ ವಿಷಯಗಳ ಸಂಶೋಧನೆಯಲ್ಲಿ ವಿಭಾಗವು ತೊಡಗಿಸಿಕೊಂಡಿದೆ. ತರಬೇತಿಗಳ ಆಯೋಜನೆ, ಜಾನುವಾರು ಉತ್ಪಾದನೆ ಕುರಿತ ಮಾಹಿತಿ ಪ್ರಕಟಣೆ, ರೈತ ಮತ್ತು ಉದ್ಯಮಶೀಲ ಯುವಕರೊಂದಿಗೆ ಸಮಾಲೋಚನೆ, ಯೋಜನಾ ವರದಿ ತಯಾರಿಕೆ, ಪ್ರಾತ್ಯಕ್ಷಿಕೆ ಮತ್ತು ಪಶು ಚಿಕಿತ್ಸಾ ಶಿಬಿರಗಳ ಆಯೋಜನೆ ಮುಂತಾದ ರೈತಪರ ವಿಸ್ತರಣಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
©2019 copyright kvafsu.edu.in
Powered by : Premier Technologies