+91-8482-245241 regkvafsu@gmail.com

ಜಾನುವಾರು ಉತ್ಪಾದನಾ ನಿರ್ವಹಣಾ ವಿಭಾಗ

ವಿಭಾಗವು ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಬೋಧನೆಯಲ್ಲಿ ತೊಡಗಿಸಿಕೊಂಡಿದೆ. ಕಲಿಕೆಯಲ್ಲಿ ಪ್ರಾಯೋಗಿಕ ಅನುಭವಕ್ಕೆ ಒತ್ತು ನೀಡುತ್ತಿದ್ದು, ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ. ಜಾನುವಾರು ಸಾಕಾಣಿಕೆ ಕೇಂದ್ರಗಳ ಮಾದರಿಗಳು, ಆಧುನಿಕ ಉಪಕರಣಗಳು ಮತ್ತು ವಿವಿಧ ವಿಷಯಗಳನ್ನು ವಿವರಿಸುವ ಭಿತ್ತಿಪತ್ರಗಳನ್ನೊಳಗೊಂಡ ಆಧುನಿಕ ವಸ್ತು ಸಂಗ್ರಹಾಲಯವು ವಿಭಾಗದ ಭಾಗವಾಗಿದೆ. ರೈತರ ಅಗತ್ಯತೆಗಳು ಹಾಗೂ ಸಾಮಾನ್ಯ ಜನರ ಅವಶ್ಯತೆಗನುಣವಾಗಿ ಪ್ರಾಣಿ ಕಲ್ಯಾಣ, ಪ್ರಾಣಿ ನಿರ್ವಹಣೆ ಮತ್ತು ವನ್ಯ ಜೀವಿಗಳ ಸಂರಕ್ಷಣೆ ವಿಷಯಗಳಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದೆ. ಹಾಗೆಯೇ, ಹಾಸನ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ರೈತರಿಗಾಗಿ ವೈಜ್ಞಾನಿಕ ಹೈನುಗಾರಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆ, ಹಂದಿ ಸಾಕಾಣಿಕೆ ಮತ್ತು ಹಿತ್ತಲಲ್ಲಿ ಕೋಳಿ ಸಾಕಾಣಿಕೆ ವಿಷಯಗಳಲ್ಲಿ ಸಲಹೆ ಸೂಚನೆ, ತರಬೇತಿಗಳನ್ನು ವಿಭಾಗವು ಹಮ್ಮಿಕೊಳ್ಳುತ್ತಿದೆ.